ವಿಶ್ವಕಪ್‌ ಫೈನಲ್‌ ಪಂದ್ಯವೇ ಮೆಸ್ಸಿ ಕೊನೆಯ ಪಂದ್ಯ: ಅಭಿಮಾನಿಗಳಿಗೆ ಶಾಕ್‌ ನೀಡಿದ ಫುಟ್ಬಾಲ್‌ ಮಾಂತ್ರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2022 ರ ಫಿಫಾ ವಿಶ್ವಕಪ್ ಫೈನಲ್ ಅರ್ಜೆಂಟೀನಾ ದೇಶದ ಪರ ತನ್ನ ಕೊನೆಯ ಪಂದ್ಯ ಎಂದು ಲಿಯೋನೆಲ್ ಮೆಸ್ಸಿ ಹೇಳಿದ್ದಾರೆ. ಬುಧವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ 3-0 ಗೋಲುಗಳಿಂದ ಕ್ರೊಯೇಷಿಯಾವನ್ನು ಸೋಲಿಸುವ ಮೂಲಕ ಫೈನಲ್‌ ಗೆ ಲಗ್ಗೆ ಇಟ್ಟಿದೆ.
ಪೆನಾಲ್ಟಿ ಅವಕಾಶದಲ್ಲಿ ಗೊಲುಗಳಿಸಿದ ಮೆಸ್ಸಿ ತಂಡವನ್ನು ಫೈನಲ್‌ ಗೆ  ಕೊಂಡೊಯ್ದಿದ್ದಾರೆ. 2005ರಲ್ಲಿ ಅರ್ಜೆಂಟೀನಾ ಪರ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮೆಸ್ಸಿ, ಕಳೆದ 17 ವರ್ಷಗಳಲ್ಲಿ ಅದ್ಭುತ ಆದ ಮೂಲಕ ವಿಶ್ವಶ್ರೇಷ್ಠರಾಗಿದ್ದಾರೆ. ಅವರು ಅರ್ಜೆಂಟೀನಾ ಪರ ಇದುವರೆಗೆ 96 ಗೋಲು ಗಳಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಇದುವರೆಗೆ ಐದು ಗೋಲುಗಳನ್ನು ಗಳಿಸಿರುವ ಮೆಸ್ಸಿ, ವಿಶ್ವ ಕಪ್‌ಗಳಲ್ಲಿ ಅರ್ಜೆಂಟೀನಾ ಪರ ಒಟ್ಟಾರೆ ಅತಿಹೆಚ್ಚು ಗೋಲುಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಗೇಬ್ರಿಯಲ್ ಬಟಿಸ್ಟುಟಾ (10) ಅವರನ್ನು ಹಿಂದಿಕ್ಕಿದ್ದಾರೆ. 35ರ ಹರೆಯದ ಮೆಸ್ಸಿ ಅವರು ಇಲ್ಲಿಯವರೆಗೆ 11 ವಿಶ್ವಕಪ್ ಗೋಲುಗಳನ್ನು ಹೊಂದಿದ್ದಾರೆ.
“ನನ್ನ ಕೊನೆಯ ಪಂದ್ಯವನ್ನು ಫೈನಲ್‌ನಲ್ಲಿ ಆಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸಲು ಇದನ್ನು ಸಾಧಿಸಲು ನನಗೆ ತುಂಬಾ ಸಂತೋಷವಾಗಿದೆ” ಎಂದು ಮೆಸ್ಸಿ ಅರ್ಜೆಂಟೀನಾದ ಮಾಧ್ಯಮಕ್ಕೆ ತಿಳಿಸಿದ್ದಾರೆ. ವೃತ್ತಿಜೀವನವನ್ನು ಈ ರೀತಿ ಮುಗಿಸುವುದು ಅತ್ಯುತ್ತಮವಾಗಿದೆ, ”ಎಂದು ಅವರು ಹೇಳಿದ್ದಾರೆ. ಅರ್ಜೆಂಟೀನಾ ಕೊನೆಯ ಬಾರಿಗೆ 1986 ರಲ್ಲಿ ವಿಶ್ವಕಪ್ ಗೆದ್ದುಕೊಂಡಿತು. ಎರಡು ಬಾರಿಯ ಚಾಂಪಿಯನ್ ತಂಡ ಅರ್ಜೆಂಟೀನಾ ಭಾನುವಾರ ಲುಸೇಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಮೊರಾಕೊ ಅಥವಾ ಫ್ರಾನ್ಸ್ ವಿರುದ್ಧ ಸೆಣಸಲಿದೆ. ಈ ವಿಶ್ವಕಪ್‌ ಗೆದ್ದು 36 ವರ್ಷದ ಪ್ರಶಸ್ತಿ ಬರ ನೀಗಿಸುವ ಜೊತೆಗೆ, ವೃತ್ತಿಜೀವವನ್ನು ಅವಿಸ್ಮರಣೀಯವಾಗಿಸಿಕೊಳ್ಳಲು ಮೆಸ್ಸಿ ಭಾನುವಾರ ಶಕ್ತಿಮೀರಿ ಹೋರಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!