ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಕ್‌ ಗೆ ವೀಸಾ ರದ್ದುಗೊಳಿಸಿದ ಆಸ್ಟ್ರೇಲಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸರ್ಬಿಯಾದ ಪ್ರಸಿದ್ಧ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಕ್‌ ಗೆ ಆಸ್ಟ್ರೇಲಿಯಾ ಸರ್ಕಾರ ವೀಸಾ ರದ್ದು ಮಾಡಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಓಪನ್‌ ಟೆನಿಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕೋವಿಡ್‌ ಸೋಂಕಿನ ಸಂಪೂರ್ಣ ಲಸಿಕೆ ಪಡೆದಿರುವ ದಾಖಲೆಗಳ ಕೊರತೆಯಿಂದ ವೀಸಾ ರದ್ದು ಮಾಡಲಾಗಿದೆ ಎಂದು ಗಡಿ ರಕ್ಷಣಾ ಪಡೆ ತಿಳಿಸಿದೆ.
ಲಸಿಕೆ ಪಡೆದ ಪುರಾವೆಗಳಿಲ್ಲದೆ ಪಂದ್ಯಾವಳಿಯಲ್ಲಿ ಆಡಲು ವೈದ್ಯಕೀಯ ವಿನಾಯಿತಿ ಇದೆ ಎಂದು ಪೋಸ್ಟ್‌ ಮಾಡಿದ ಬಳಿಕ ಜೊಕೊವಿಕ್‌ ರನ್ನು ಮೆಲ್ಬರ್ನ್‌ ನ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆಹಿಡಿದಿದ್ದಾರೆ. ಸದ್ಯದ ಈ ಬೆಳವಣಿಗೆಯ ಆಧಾರದ ಮೇಲೆ ಜೊಕೊವಿಕ್‌ ಆಸ್ಟ್ರೇಲಿಯಾ ಓಪನ್‌ ಗ್ರ್ಯಾನ್‌ ಸ್ಲಾಂ ನಲ್ಲಿ ಆಡುವುದು ಅನುಮಾನವಾಗಿದೆ.
ಈ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾದ ಗೃಹ ಸಚಿವೆ ಕರೆನ್‌ ಆಂಡ್ರೋಸ್‌, ಆಸ್ಟ್ರೇಲಿಯಾ ಗಡಿ ನಿಯಮಗಳು ಎಲ್ಲರಿಗೂ ಒಂದೆ. ಎಲ್ಲಾ ನಿಯಮಗಳು ಟೆನಿಸ್‌ ತಾರೆಗಳಿಗೂ ಅನ್ವಯಿಸಲಾಗುತ್ತದೆ ಎಂದಿದ್ದಾರೆ. ಲಸಿಕೆ ಪಡೆದ ಸೂಕ್ತ ದಾಖಲೆ ಒದಗಿಸದಿದ್ದರೆ ಮನೆಗೆ ಮರಳುವಂತೆ ಸರ್ಕಾರ ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!