Tuesday, June 6, 2023

Latest Posts

ಭದ್ರತಾ ಲೋಪ: ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ ಕಂಗನಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ ಭದ್ರತಾ ಲೋಪವಾದ ಪ್ರಕರಣವನ್ನು ಬಾಲಿವುಡ್ ನಟಿ ಕಂಗನಾ ಖಂಡಿಸಿದ್ದಾರೆ.
ಪಂಜಾಬ್‌ನಲ್ಲಿ ನಡೆದಿದ್ದು ನಾಚಿಕೆಗೇಡಿನ ಸಂಗತಿ. ಪ್ರಧಾನಿಯವರು ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿರುತ್ತಾರೆ. 1.4  ಬಿಲಿಯನ್ ಮಂದಿಯ ಏಕೈಯ ಧ್ವನಿಯಾಗಿದ್ದಾರೆ. ನಮ್ಮೆಲ್ಲರ ಪ್ರತಿನಿಧಿಯಾಗಿದ್ದಾರೆ. ಅವರ ಮೇಲೆ ಆಕ್ರಮಣ ಆದರೆ ದೇಶದ ನಾಗರಿಕರ ಮೇಲೆ ಆಕ್ರಮಣವಾದಂತೆ.


ಪಂಜಾಬ್‌ನಲ್ಲಿ ಏನಾಗುತ್ತಿದೆ ಎಂದು ಹೇಳುವುದೇ ಕಷ್ಟವಾಗಿದೆ. ಕ್ರಮೇಣ ಪಂಜಾಬ್ ಭಯೋತ್ಪಾದಕ ಚಟುವಟಿಕೆಗಳ ತಾಣವಾಗುತ್ತಿದೆ. ಇದನ್ನು ತಡೆಯದಿದ್ದರೆ, ದೊಡ್ಡ ಬೆಲೆ ತೆರೆಬೇಕಾಗುತ್ತದೆ.
ನಾವೆಲ್ಲರೂ ಪ್ರಧಾನಿ ಜೊತೆಗಿದ್ದೇವೆ. ಭಾರತ್ ಸ್ಟಾಂಡ್ಸ್ ವಿತ್ ಹಿಮ್ ಎನ್ನುವ ಹ್ಯಾಷ್‌ಟ್ಯಾಗ್ ಬಳಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!