ಆಸ್ಟ್ರೇಲಿಯನ್ ಓಪನ್ : ನಡಾಲ್, ಒಸಾಕಾ ಮೂರನೇ ಸುತ್ತಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

21ನೇ ಗ್ರಾಂಡ್‌ಸ್ಲಾಮ್ ಗೆಲ್ಲುವತ್ತ ದೃಷ್ಟಿ ನೆಟ್ಟಿರುವ ರಾಫೆಲ್ ನಡಾಲ್ ಆ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅವರು ಜರ್ಮನಿಯ ಯಾನ್ನಿಕ್ ಹಾಫ್‌ಮನ್‌ರನ್ನು ಸೋಲಿಸುವ ಮೂಲಕ ಮೂರನೇ ಸುತ್ತಿಗೇರಿದ್ದಾರೆ.
ಮಹಿಳಾ ವಿಭಾಗದಲ್ಲಿ ಹಾಲಿ ಚಾಂಪ್ಯನ್ ನವೋಮಿ ಒಸಾಕಾ ಕೂಡ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಫೆಡರರ್ ಮತ್ತು ಜೋಕೋವಿಕ್ ಅನುಪಸ್ಥಿತಿಯಿಂದಾಗಿ ನಡಾಲ್ ಪ್ರಶಸ್ತಿ ಗೆಲ್ಲುವ ಸಾಧ್ಯತೆಗಳು ಉಜ್ವಲವಾಗಿದ್ದು, ಹಾಗೆ ಗೆದ್ದಲ್ಲಿ ನಾಲ್ಕೂ ಗ್ರಾಂಡ್‌ಸ್ಲಾಮ್‌ಗಳನ್ನು ಎರಡೆರಡು ಬಾರಿ ಗೆದ್ದ ವಿಶೇಷ ಸಾಧನೆಗೈಯಲಿದ್ದಾರೆ.
ಆದರೆ ಕಾಲುನೋವಿನಿಂದಾಗಿ ದೀರ್ಘಕಾಲ ಹೊರಗುಳಿದಿದ್ದ ನಡಾಲ್ ಈ ಬಾರಿ ಪ್ರಶಸ್ತಿ ಗೆಲ್ಲಲು ಸಾಕಷ್ಟು ಪ್ರಯತ್ನ ನಡೆಸಬೇಕಾಗಿದೆ. ಅವರು ಕೂಡ ಪ್ರಶಸ್ತಿ ಗೆಲ್ಲುವುದಕ್ಕಿಂತಲೂ ತನ್ನ ಆರೋಗ್ಯ ಮತ್ತು ದೈಹಿಕ ಕ್ಷಮತೆ ಉಳಿಸಿಕೊಳ್ಳುವತ್ತ ತನ್ನ ಆದ್ಯತೆ ಎಂದು ಹೇಳಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಅವರ ಫ್ರೆಂಚ್ ಜತೆಗಾರ ರೋಜರ್ ವೆಸೆಲಿನ್ ಅವರು ಸೋತು ಹೊರಬಿದ್ದರು.
ಮಹಿಳಾ ವಿಭಾಗದಲ್ಲಿ ಒಸಾಕಾ ಅವರು ಬ್ರೆಂಗ್ಲ್‌ರನ್ನು 6-0, 60-4 ಸೆಟ್‌ಗಳಿಂದ ಸೋಲಿಸಿದರು. ಮತ್ತೊಂದು ಪಂದ್ಯದಲ್ಲಿ ವಿಂಬಲ್ಡನ್ ಚಾಂಪ್ಯನ್ ಆಶ್ ಬಾರ್ಟಿ ಕೂಡ ಸುಲಭ ಗೆಲುವು ದಾಖಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!