ಬಿಬಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ದಾಖಲೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಬಿಎಲ್ (ಬಿಗ್ ಬ್ಯಾಶ್ ಲೀಗ್)ನಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ 64 ಎಸೆತಗಳಿಂದ ಅಜೇಯ 154 ರನ್ ಬಾರಿಸಿ ದಾಖಲೆ ಸ್ಥಾಪಿಸಿದ್ದಾರೆ. ಅವರ ಇನ್ನಿಂಗ್ಸ್‌ನಲ್ಲಿ 22 ಬೌಂಡರಿ ಹಾಗೂ 4 ಸಿಕ್ಸರ್‌ಗಳಿದ್ದವು.
ಅವರ ತಂಡವಾದ ಮೆಲ್ಬೋರ್ನ್ ಸ್ಟಾರ‍್ಸ್ 20 ಓವರುಗಳಲ್ಲಿ 2 ವಿಕೆಟಿಗೆ 273 ರನ್ ಗಳಿಸಿದ್ದು, ಇದು ಟಿ20 ಕ್ರಿಕೆಟಿನಲ್ಲಿ ಮೂರನೇ ಅತೀ ದೊಡ್ಡ ಮೊತ್ತವಾಗಿದೆ. ಬಿಬಿಎಲ್‌ನಲ್ಲಿ ಇದು ಗರಿಷ್ಠ ಮೊತ್ತವಾಗಿದೆ. ಮ್ಯಾಕ್ಸ್‌ವೆಲ್ ತಮ್ಮ ಶತಕವನ್ನು 41 ಎಸೆತಗಳಲ್ಲಿ ಪೂರೈಸಿದರು.
ಮ್ಯಾಕ್ಸ್‌ವೆಲ್ ಮತ್ತು ಜೋ ಕ್ಲರ್ಕ್ ಮೊದಲ 7 ಓವರುಗಳಲ್ಲೆ 97 ರನ್ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!