ಹೊಸದಿಗಂತ ಡಿಜಿಟಲ್ ಡೆಸ್ಕ್:
ತಲೆಯ ಮೇಲಿಟ್ಟುಕೊಂಡು ಮೆರೆಸಬೇಕಿದ್ದ ಟ್ರೋಫಿಯ ಮೇಲೆ ಆಸಿಸ್ ಆಟಗಾರ ಮಿಚೆಲ್ ಮಾರ್ಶ್ ಕಾಲಿಟ್ಟು ಕುಳಿತಿರುವ ಫೋಟೊ ಎಲ್ಲೆಡೆ ವೈರಲ್ ಆಗಿದೆ.
ವಿಶ್ವಕಪ್ ಗೆಲ್ಲುವುದು ಎಲ್ಲ ಕ್ರಿಕೆಟ್ ತಂಡಗಳ ಕನಸಾಗಿರುತ್ತದೆ. ಎಲ್ಲ ಸವಾಲುಗಳನ್ನು ಎದುರಿಸಿ ಬಂದು ಕಡೆಗೆ ಟ್ರೋಫಿಗೆ ಬೆಸ್ಟ್ ತಂಡ ಮುತ್ತಿಕ್ಕುತ್ತದೆ. ಟ್ರೋಫಿಯನ್ನು ತಲೆ ಮೇಲೆ ಇಟ್ಟುಕೊಂಡು ಇಡೀ ತಂಡ ಸಂಭ್ರಮಿಸುತ್ತದೆ. ಆದರೆ ಇಲ್ಲಿ ಟ್ರೋಫಿಗೆ ಬೆಲೆ ಕೊಡದೇ ಕಾಲಿಟ್ಟುಕೊಂಡು ಕುಳಿತಿದ್ದಾರೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ಇದು ದುರಹಂಕಾರ, ಮಾಡಿದ ಕೆಲಸಕ್ಕೆ, ಸಿಕ್ಕ ಟ್ರೋಫಿಗೆ ಬೆಲೆ ಕೊಡಬೇಕು. ಈ ರೀತಿ ಮಾಡಿದ್ದು ಟ್ರೋಫಿಗೆ ಮಾಡುವ ಅವಮಾನ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.