Sunday, March 26, 2023

Latest Posts

ಭಾರತದ ಆಚರಣೆಗಳಿಗೆ ಆಸ್ಟ್ರೇಲಿಯಾ ಪ್ರಧಾನಿ ಫಿದಾ, ನಿಮ್ಮ ಆತಿಥ್ಯವೇ ಬೆಸ್ಟ್ ಎಂದ ಅಲ್ಬನೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಅಲ್ಬನೀಸ್ ಹೋಳಿ ಹಬ್ಬದಂದು ಗುಜರಾತ್‌ನ ರಾಜಧಾನಿ ಗಾಂಧಿನಗರಕ್ಕೆ ಭೇಟಿ ನೀಡಿದ್ದು, ಹೋಳಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಭಾರತದಲ್ಲಿ ಹಬ್ಬದ ಆಚರಣೆಗಳಿಗೆ ಫಿದಾ ಆಗಿರುವ ಆಸ್ಟ್ರೇಲಿಯಾ ಪ್ರಧಾನಿ ಈ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ನಾಲ್ಕು ದಿನಗಳು ಭಾರತ ಪ್ರವಾಸದಲ್ಲಿರುವ ಅಲ್ಬನೀಸ್ ಅವರಿಗಾಗಿ ರಾಜ್ಯಪಾಲರು ಹೋಳಿ ಸಂಭ್ರಮಾಚರಣೆಯನ್ನು ಆಯೋಜಿಸಿದ್ದರು. ಹೋಳಿ ಆಚರಣೆಯಲ್ಲಿ ಭಾಗಿಯಾದ ಅಲ್ಬನೀಸ್, ಆಚರಣೆಯ ಖುಷಿಯನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಹೋಳಿ ಹಬ್ಬವನ್ನು ಆಚರಿಸಿದೆ, ಇದು ಕೆಟ್ಟದರ ವಿರುದ್ಧ ಒಳಿತಿನ ವಿಜಯದಂತೆ ಕಾಣುತ್ತಿತ್ತು. ಇದು ಹೋಳಿ ಹಬ್ಬದ ಸಂದೇಶವಾಗಿದ್ದು, ಇದನ್ನು ನಾವು ಮರೆಯುವುದಿಲ್ಲ. ನಿಮ್ಮ ನಂಬಿಕೆಗಳು ಏನೇ ಆಗಿರಲಿ, ಹೋಳಿ ಹಬ್ಬದ ಆಚರಣೆಗೆ ಯಾರು ಎಲ್ಲಿಂದಲೇ ಬಂದಿರಲಿ ಎಲ್ಲರನ್ನು ನೀವು ಒಂದುಗೂಡಿಸುತ್ತೀರಿ, ಇದನ್ನು ನಾವು ಗೌರವಿಸುತ್ತೇವೆ ಹಾಗೂ ಸಂಭ್ರಮಿಸುತ್ತೇವೆ ಎಂದು ಹೇಳಿದ್ದಾರೆ.

ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತೇನೆ, ನಾನು ಪ್ರಧಾನಿಯಾಗಿ ಭಾರತಕ್ಕೆ ಬಂದಿದ್ದು ಇದೇ ಮೊದಲು ಆದರೆ 1991ರಲ್ಲಿ ಆರು ವಾರ ಭಾರತದಲ್ಲೇ ಇದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!