Saturday, January 10, 2026

ಆ್ಯಶಸ್‌ನಲ್ಲಿ ಮುಂದುವರಿದ ಆಸ್ಟ್ರೇಲಿಯಾ ದರ್ಬಾರ್: ಇಂಗ್ಲೆಂಡ್‌ಗೆ ಮತ್ತೊಮ್ಮೆ ನಿರಾಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೊಡ್ಡ ನಿರೀಕ್ಷೆಗಳು, ಆಕ್ರಮಣಕಾರಿ ಬಾಝ್ ಬಾಲ್ ತಂತ್ರ ಮತ್ತು ಇತಿಹಾಸ ಬರೆಯುವ ಕನಸು—ಇವೆಲ್ಲವನ್ನೂ ಕೈಯಲ್ಲಿ ಹಿಡಿದು ಆಸ್ಟ್ರೇಲಿಯಾದಲ್ಲಿ ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡಕ್ಕೆ ಅಂತಿಮವಾಗಿ ಕೈಗೆ ಬಂದದ್ದು ಮತ್ತೊಂದು ಸರಣಿ ಸೋಲು. ಐದು ಪಂದ್ಯಗಳ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ 4–1 ಅಂತರದ ಗೆಲುವಿನೊಂದಿಗೆ ತನ್ನ ಪ್ರಾಬಲ್ಯವನ್ನು ಮತ್ತೆ ಸಾಬೀತುಪಡಿಸಿದೆ.

ಮೊದಲ ಎರಡು ಟೆಸ್ಟ್‌ಗಳಲ್ಲಿ 8 ವಿಕೆಟ್‌ಗಳ ಸ್ಪಷ್ಟ ಜಯ ಸಾಧಿಸಿದ್ದ ಕಾಂಗರೂ ಪಡೆ, ಮೂರನೇ ಪಂದ್ಯದಲ್ಲಿ 82 ರನ್‌ಗಳ ಗೆಲುವು ದಾಖಲಿಸಿ ಸರಣಿಯನ್ನು ಮುಂಚಿತವಾಗಿಯೇ ತನ್ನದಾಗಿಸಿಕೊಂಡಿತು. ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಕಂಬ್ಯಾಕ್ ಮಾಡಿ 4 ವಿಕೆಟ್‌ಗಳ ಜಯ ಸಾಧಿಸಿದರೂ, ಐದನೇ ಮತ್ತು ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತೆ ಮೇಲುಗೈ ಸಾಧಿಸಿತು.

ಇದನ್ನೂ ಓದಿ: Snack | ಕ್ರಿಸ್ಪಿ & ಸ್ಪೈಸಿ ಸ್ನಾಕ್ ತಿನ್ನೋಕೆ ಆಸೆಯಾಗಿದ್ಯಾ? ಹಾಗಿದ್ರೆ ಆಲೂ ಫ್ರೈ ರೆಸಿಪಿ ಟ್ರೈ ಮಾಡ್ಲೇಬೇಕು

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 384 ರನ್ ಗಳಿಸಿತು. ಅದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ 567 ರನ್‌ಗಳ ಭಾರೀ ಮೊತ್ತ ಪೇರಿಸಿ 183 ರನ್ ಮುನ್ನಡೆ ಪಡೆದಿತು. ದ್ವಿತೀಯ ಇನಿಂಗ್ಸ್‌ನಲ್ಲಿ ಜೇಕಬ್ ಬೆಥೆಲ್ 154 ರನ್‌ಗಳ ಶತಕದಾಟವಾಡಿದರೂ, ಇಂಗ್ಲೆಂಡ್ 342 ರನ್‌ಗಳಿಗೆ ಆಲೌಟ್ ಆಯಿತು.

160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 31.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.

error: Content is protected !!