ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಇಂದಿನಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ
ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಎಕ್ಸ್‌ಪ್ರೆಸ್‌ವೇ ನಲ್ಲಿ ಈವರೆಗೂ 290ಕ್ಕೂ ಅಧಿಕ ಅಪಘಾತವಾಗಿದ್ದು, 130ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ನಿಯಮವನ್ನು ಇಂದಿನಿಂದ ಜಾರಿಗೊಳಿಸಲಾಗಿದೆ.
ಈಗಾಗಲೇ ಅನಧಿಕೃತವಾಗಿ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಇದೀಗ ಅಧಿಕೃತ ಆದೇಶದ ಅನ್ವಯ ಕಡ್ಡಾಯವಾಗಿ ನಿಯಮ ಚಾಲನೆಗೆ ಬರಲಿದೆ.
ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದರೆ 500 ರೂಪಾಯಿ ದಂಡ ಪಾವತಿಸಬೇಕಿರುತ್ತದೆ. ಅಲ್ಲದೆ ಇದರ ಪರಿಶೀಲನೆಗಾಗಿ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿಯೇ ಒಟ್ಟು 9 ಕಡೆ ಪೊಲೀಸರಿಂದ ತಪಾಸಣೆ ನಡೆಸಲಾಗುತ್ತದೆ.
ಇನ್ನು ಎಕ್ಸ್ ಪ್ರೆಸ್ ವೇ ನಲ್ಲಿ ಚಲಿಸುವ ವಾಹನಗಳಿಗೂ ವೇಗಮಿತಿಯನ್ನು ನಿಗದಿಪಡಿಸಲಾಗಿದ್ದು, ಎಡ ಭಾಗದಲ್ಲಿ ಸಂಚರಿಸುವ ವಾಹನಗಳು 60 ಕಿ.ಮೀ., ಮಧ್ಯದಲ್ಲಿ ಸಂಚರಿಸುವ ವಾಹನಗಳು 80 ಕಿ.ಮೀ. ಹಾಗೂ ಬಲ ಭಾಗದಲ್ಲಿ ಚಲಿಸುವ ವಾಹನಗಳು 100 ಕಿಲೋಮೀಟರ್ ಗರಿಷ್ಠ ಮಿತಿ ಮೀರಬಾರದು ಎಂದು ಸೂಚನೆ ನೀಡಲಾಗಿದೆ.