ಹಾಲು, ಕಾಫಿ, ಊಟ, ತಿಂಡಿ, ಟೊಮ್ಯಾಟೊ… ಇಂದಿನಿಂದ ಎಲ್ಲವೂ ದುಬಾರಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ನಂದಿನ ಹಾಲಿನ ದರ ಲೀಟರ್‌ಗೆ ಮೂರು ರೂಪಾಯಿ ಏರಿಕೆಯಾಗಿದೆ, ಜತೆಗೆ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾದ ಹಿನ್ನೆಲೆಯಲ್ಲಿ ಹೊಟೇಲ್ ಊಟ,ತಿಂಡಿ ಮೇಲೆಯೂ ಶೇ.10ರಷ್ಟು ದರ ಏರಿಕೆಯಾಗಿದೆ.

Fighting Food Waste in Hospitality and Food Service | Pages | WWFಬೆಲೆ ಏರಿಕೆಯಿಂದ ಮಧ್ಯಮವರ್ಗದವರಿಗೆ ಪೆಟ್ಟು ಬಿದ್ದಿದ್ದು, ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಹಿಂದೆಮುಂದೆ ನೋಡುವಂತಾಗಿದೆ. ಈಗಾಗಲೇ ಟೊಮ್ಯಾಟೊ ದರ ಏರಿಕೆಯಿಂದ ಬೇಸತ್ತ ಜನರಿಗೆ ಮತ್ತೊಂದು ಶಾಕ್ ಆಗಿದೆ. ಟೊಮ್ಯಾಟೊ ಬೆಲೆಯೂ ಏಕಾಏಕಿ ಮತ್ತೆ ಏರಿಕೆಯಾಗಿದ್ದು, ಕೆಲವೆಡೆ ಕೆಜಿಗೆ 200 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ.

Tomato price shock hits Indian restaurants, cheaper puree sales boom |  Reutersಟೋನ್ಡ್ ಹಾಲು ಈ ಹಿಂದೆ ಲೀಟರ್‌ಗೆ 39ರೂಪಾಯಿಗಳಾಗಿದ್ದು, ಇದೀಗ 42 ರೂಪಾಯಿ ಆಗಿದೆ. ಹೋಮೋಜಿನೈಸ್ಡ್ ಹಾಲಿನ ಬೆಲೆ 43 ರೂಪಾಯಿ ಆಗಿದೆ. ಹಸುವಿನ ಹಾಲಿನ ಗ್ರೀನ್ ಪ್ಯಾಕೆಟ್ ಬೆಲೆ 46 ರೂಪಾಯಿ ಆಗಿದೆ. ಮೊಸರು ಪ್ರತೀ ಲೀಟರ್‌ಗೆ 50 ರೂಪಾಯಿ ಆಗಿದೆ.

Nandini | Karnataka government decides to hike Nandini milk price by Rs 3  per litre - Telegraph Indiaಹೊಟೇಲ್‌ಗಳಲ್ಲಿ ಕಾಫಿ ದರ ಏರಿಕೆಯಾಗಿದ್ದು, ಒಂದು ಲೋಟ ಕಾಫಿಗೆ ಈ ಮೊದಲು 10 ರೂಪಾಯಿ ಇದ್ದು, ಇದೀಗ ಇದನ್ನು 13 ರೂಪಾಯಿಗೆ ಏರಿಕೆ ಮಾಡಲಾಗಿದೆ. ತಿಂಡಿ ಹಾಗೂ ಊಟದ ಬೆಲೆ 5-10ರೂಪಾಯಿ ಹೆಚ್ಚಾಗುವ ಸಾಧ್ಯತೆ ಇದೆ.

Masala Dosa, Coffee price in 1971! Pic of old bill will blow your mind...

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!