ಮತ್ತಷ್ಟು ʼಬಿಸಿʼಯಾಗಲಿದೆ ಕಾಫಿದರ, ತಿಂಗಳಿನಾದ್ಯಂತ ಕಪ್ ಕಾಫಿ ಬೆಲೆ 3 ರೂ. ಏರಿಕೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಈಗಾಗಲೇ ಬಸ್, ಮೆಟ್ರೋ, ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ, ಇನ್ಮುಂದೇ ಕಾಫಿ ದರ ಏರಿಕೆಯ ಬಿಸಿ ತಟ್ಟಲಿದೆ. ತಿಂಗಳಾಂತ್ಯಕ್ಕೆ 1 ಕಪ್ ಕಾಫಿ ಬೆಲೆ 2ರಿಂದ 3 ರೂ. ಏರಿಕೆಯಾಗುವ ಸಾಧ್ಯತೆಯಿದೆ.

ಕಾಫಿ ಬೆಲೆ ಇನ್ನೂ 2 ರಿಂದ 3 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ. ಕಳೆದ ತಿಂಗಳಷ್ಟೇ ಶೇಕಡಾ 15ರಷ್ಟು ಕಾಫಿ ಬೆಲೆ ಹೆಚ್ಚಾಗಿತ್ತು.

ಸದ್ಯ ಹೊಟೇಲ್‌ಗಳಲ್ಲಿ 1 ಕಪ್ ಕಾಫಿಗೆ 15 ರಿಂದ 17 ರೂ. ಇದೆ. ಈ ತಿಂಗಳಾಂತ್ಯಕ್ಕೆ 20 ರೂ. ಆಗುವ ಸಾಧ್ಯತೆಯಿದೆ. ಹಾಲಿನ ಬೆಲೆಕ್ಕಿಂತ ಕಾಫಿಗೆ ಹಾಕುವ ಡಿಕಾಕ್ಷನ್ ಬೆಲೆಯೇ ಹೆಚ್ಚಾಗಲಿದೆ ಎನ್ನಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!