ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಮಾ. 20ರಂದು ಆಟೋ ಚಾಲಕರ ಮುಷ್ಕರ ನಡೆಯಲಿದ್ದು, ಅಂದು ಆಟೋಗಳು ಸಿಗೋದಿಲ್ಲ.
ರಾಜಧಾನಿಯಲ್ಲಿರುವ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸಬೇಕು ಎಂದು ಸರ್ಕಾರಕ್ಕೆ ಆಟೋ ಚಾಲಕರು ಸಾಕಷ್ಟು ಬಾರಿ ಒತ್ತಡ ಹೇರಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ಯಾವ ಕ್ರಮ ತೆಗೆದುಕೊಂಡಿಲ್ಲ, ಅಸಮಾಧಾನದಿಂದ ರಾಜಧಾನಿಯಲ್ಲಿ 21 ಆಟೋ ಚಾಲಕರ ಸಂಘಟನೆಗಳು ಆಟೋ ಬಂದ್‌ಗೆ ಕರೆ ನೀಡಿವೆ.
ಈಗಾಗಲೇ ಓಲಾ, ಊಬರ್‌ನಿಂದ ಆಟೋ ಚಾಲಕರ ಕಮಾಯಿಗೆ ಕತ್ತರಿಯಾಗಿದೆ, ಇದೀಗ ಇವುಗಳ ಜೊತೆ ರ‍್ಯಾಪಿಡೋಗೂ ಅನುಮತಿ ನೀಡಲಾಗಿದೆ, ಆಟೋ ಚಾಲಕರ ಆದಾಯಕ್ಕೆ ಹೊಡೆತ ಬಿದ್ದಿದೆ ಎಂದು ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ನಾಳೆಯಿಂದಲೇ ಮೌನ ಪ್ರತಿಭಟನೆ ಆರಂಭವಾಗಲಿದ್ದು, ಆಟೋಗಳಿಗೆ ಕಪ್ಪು ಪಟ್ಟಿ ಕಟ್ಟಿ ಓಡಿಸಲಾಗುತ್ತದೆ. ಸೋಮವಾರದಂದು ಮುಷ್ಕರ ನಡೆಸಿ ಸಿಎಂ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದ್ದಾರೆ.