Wednesday, September 27, 2023

Latest Posts

SHOCKING| ಶಾಲಾ ಮಕ್ಕಳಿದ್ದ ಆಟೋ ಪಲ್ಟಿ: 8 ವಿದ್ಯಾರ್ಥಿಗಳಿಗೆ ಗಾಯ

ಹೊಸದಿಗಂತ ವರದಿ ಮಡಿಕೇರಿ:

ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾಗಿ ಎಂಟು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತೊರೆನೂರಿನ ಅರಗಲ್ ನಲ್ಲಿ‌ ನಡೆದಿದೆ.

ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಲಿಂಗಪುರ, ಅಳುವಾರ, ಅರಗಲ್ ಗ್ರಾಮಗಳ 8 ವಿದ್ಯಾರ್ಥಿಗಳು ತೊರೆನೂರು ಪ್ರೌಢಶಾಲೆಯಲ್ಲಿ ತರಗತಿ ಮುಗಿಸಿ ಆಟೋದಲ್ಲಿ‌ ಮನೆಗೆ ತೆರಳುತ್ತಿದ್ದ ಸಂದರ್ಭ ಆಟೋ ಪಲ್ಟಿಯಾಗಿರುವುದಾಗಿ ಹೇಳಲಾಗಿದೆ. ಈ ಸಂದರ್ಭ ಗಂಭೀರವಾಗಿ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ಅಳುವಾರ ಮತ್ತು ಅರಗಲ್‌ನ ವಿದ್ಯಾರ್ಥಿಗಳಿಗೆ ತೊರೆನೂರಿನ ಪ್ರೌಢಶಾಲೆಗೆ ಬಂದು ಹೋಗಲು ಬಸ್ ವ್ಯವಸ್ಥೆ ಇಲ್ಲದ ಕಾರಣ ಅನೇಕ ಪೋಷಕರು ಆಟೋವನ್ನು ಅವಲಂಬಿಸಿ ಅದರ ಮೂಲಕ ಕಳುಹಿಸಿಕೊಡುತ್ತಿದ್ದಾರೆ. ಅದರಂತೆ ಶನಿವಾರ , ಪ್ರೌಢಶಾಲೆಯ 8ನೇ ತರಗತಿಯ ವಿಧ್ಯಾರ್ಥಿಗಳನ್ನು ತರಗತಿ ಮುಗಿಸಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಆಟೋ ಬಾಣಾವರ ಭೈರಪ್ಪನ ಗುಡಿಯ ರಸ್ತೆಯ ಬದಿಗೆ ಬಿದ್ದಿದೆ.

ಆಟೋದಲ್ಲಿ 8ನೇ ತರಗತಿಯ 8 ವಿದ್ಯಾರ್ಥಿಗಳಿದ್ದು, ಅವರುಗಳಲ್ಲಿ ಮೂರು ವಿದ್ಯಾರ್ಥಿಗಳಿಗೆ ತೀವ್ರವಾದ ಪೆಟ್ಟಗಾಗಿದೆ. ಅದರಲ್ಲಿ ಇಬ್ಬರೂ ವಿದ್ಯಾರ್ಥಿಗಳನ್ನು ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಓರ್ವ ವಿದ್ಯಾರ್ಥಿಯನ್ನು ಮಡಿಕೇರಿಯ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಉಳಿದ ವಿದ್ಯಾರ್ಥಿಗಳು ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಆಸ್ಪತ್ರೆಗೆ ಶಾಸಕರ ಭೇಟಿ:

ಆಟೋ ಅವಘಡದ ಸುದ್ದಿ ತಿಳಿದ ಮಡಿಕೇರಿ‌ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಬೆಂಗಳೂರಿನಿಂದ ಬರುವ ಮಧ್ಯೆ ಮೈಸೂರಿನ ಜೆ.ಎಸ್.ಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಶಾಲಾ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!