Saturday, December 9, 2023

Latest Posts

ಬುರ್ಜ್ ಖಲೀಫಾ ಮೇಲೆ ತ್ರಿವರ್ಣ ಧ್ವಜ ಬೆಳಗಿಸಿ ಪ್ರಧಾನಿಗೆ ಭವ್ಯ ಸ್ವಾಗತ ಕೋರಿದ ಯುಎಇ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭವ್ಯ ಸ್ವಾಗತವನ್ನು ಕೋರಿದೆ. ಐಕಾನಿಕ್ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಭಾರತದ ತ್ರಿವರ್ಣ ಧ್ವಜ ಬೆಳಗಿಸಿ ಬೆರಗುಗೊಳಿಸುವ ಸ್ವಾಗತವನ್ನು ನೀಡಿದರು. ಅಂತೆಯೇ
ಗಗನಚುಂಬಿ ಕಟ್ಟಡವು ಮೋದಿಯವರ ಭಾವ ಚಿತ್ರವನ್ನು ಸಹ ಪ್ರದರ್ಶಿಸಿ “ಗೌರವಾನ್ವಿತ ಸ್ವಾಗತ” ಎಂದು ಬರೆಯಲಾಗಿತ್ತು.

ಅಧಿಕೃತ ಭೇಟಿಗಾಗಿ ಶನಿವಾರ ಅಬುಧಾಬಿಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ವಿದ್ಯಕ್ತ ಸ್ವಾಗತವನ್ನು ಕೋರಲಾಯಿತು. ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾದರು.

ಗಲ್ಫ್ ರಾಷ್ಟ್ರಕ್ಕೆ ಆತ್ಮೀಯ ಸ್ವಾಗತಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿ, “ಇಂದು ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ್ದಕ್ಕಾಗಿ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಕೃತಜ್ಞತೆಗಳು” ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಬುಧಾಬಿಗೆ ಬಂದಿಳಿಯುವ ಕೆಲವೇ ಗಂಟೆಗಳ ಮೊದಲು, ಯುನೈಟೆಡ್ ಅರಬ್ ಎಮಿರೇಟ್ಸ್ ಭಾರತದೊಂದಿಗೆ ತನ್ನ ಆರ್ಥಿಕ ಪಾಲುದಾರಿಕೆ “ಎರಡೂ ರಾಷ್ಟ್ರಗಳ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು” ಎಂದು ಹೇಳಿದೆ.
2030 ರ ವೇಳೆಗೆ ಯುಎಇ-ಭಾರತ ತೈಲೇತರ ವ್ಯಾಪಾರವು ವರ್ಷಕ್ಕೆ USD 100 ಶತಕೋಟಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಯುಎಇಯ ವಿದೇಶಿ ವ್ಯಾಪಾರದ ರಾಜ್ಯ ಸಚಿವ ಡಾ ಥಾನಿ ಬಿನ್ ಅಹ್ಮದ್ ಅಲ್ ಝೆಯೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಪ್ರಧಾನಿ ತಮ್ಮ ಎರಡು ದಿನಗಳ ಫ್ರಾನ್ಸ್ ಭೇಟಿಯನ್ನು ಮುಗಿಸಿದ ನಂತರ ಶನಿವಾರ ಮುಂಜಾನೆ ಯುಎಇಗೆ ಪ್ರಯಾಣ ಬೆಳೆಸಿದರು.
ತಮ್ಮ ಎರಡು ದಿನಗಳ ಫ್ರಾನ್ಸ್ ಪ್ರವಾಸದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಶುಕ್ರವಾರ ಬಾಸ್ಟಿಲ್ ಡೇ ಆಚರಣೆಯಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!