ಬಸ್​ ಟಿಕೆಟ್​ ದರ ಏರಿಕೆ ಬೆನ್ನಲ್ಲೇ ಆಟೋ ಪ್ರಯಾಣ ಬೆಲೆ ಹೆಚ್ಚಳಕ್ಕೆ ಪಟ್ಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸರ್ಕಾರಿ ಬಸ್ ದರ ಶೇ.15 ರಷ್ಟು ಏರಿಕೆಯಾಗಿದ್ದು, ಇದರ ಬೆನ್ನಲ್ಲೇ ಆಟೋ ಪ್ರಯಾಣ ಬೆಲೆ ಹೆಚ್ಚಳಕ್ಕೂ ಆಗ್ರಹಗಳು ವ್ಯಕ್ತವಾಗುತ್ತಿವೆ.

ಶನಿವಾರ ಮಧ್ಯರಾತ್ರಿಯಿಂದಲೇ ಬಸ್ ದರ ಏರಿಕೆ ಜಾರಿಗೆ ಬಂದಿದ್ದು, ಆಟೋ ಚಾಲಕರೂ ಕೂಡ ಪ್ರಯಾಣಿಕರಿಗೆ ಹೆಚ್ಚಿನ ಶುಲ್ಕ ವಿಧಿಸಲು ಶುರು ಮಾಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ನಗರದಲ್ಲಿ ಕಾರ್ಯನಿರ್ವಹಿಸುವ ಅನೇಕ ಆಟೋಗಳು ಮೀಟರ್‌ ಅನ್ವಯದಂತೆ ಶುಲ್ಕ ಪಡೆಯಲು ನಿರಾಕರಿಸುತ್ತಿದ್ದಾರೆ. ಇದರಿಂದ ಜನರಿಗೆ ಆಟೋ ಸಿಗುವುದು ಕಷ್ಟವಾಗುತ್ತಿದೆ. ಬಸ್ ದರ ಏರಿಕೆಯೊಂದಿಗೆ ಇದು ಜನರಿಗಾಗುತ್ತಿರುವ ದೊಡ್ಡ ಹೊಡೆತವಾಗಿದೆ. ಅವರ ಬೇಡಿಕೆಯಂತೆ ಹಣ ನೀಡಲು ಒಪ್ಪಿಕೊಂಡರೆ ಮಾತ್ರ ಆಟೋಗಳು ಬರುತ್ತಿವೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಆಟೋ ದರಗಳು ಒಂದೇ ಆಗಿದ್ದರೂ, ನಿರ್ವಹಣಾ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಶಿವಮೊಗ್ಗ, ಮಂಗಳೂರು ಮತ್ತು ಉಡುಪಿಯಂತಹ ಟೈಯರ್ 2 ನಗರಗಳಲ್ಲಿ 2023 ರಲ್ಲಿ ಆಟೋ ದರಗಳನ್ನು ಪರಿಷ್ಕರಿಸಲಾಗಿದೆ. ಆದರೆ ಜೀವನ ವೆಚ್ಚವು ತುಂಬಾ ಹೆಚ್ಚಿರುವ ಬೆಂಗಳೂರಿನಲ್ಲಿ ಮಾತ್ರ ದರಗಳನ್ನು ಹೆಚ್ಚಿಸಿಲ್ಲ. ಈಗಿರುವ ದರಗಳೊಂದಿಗೆ ನಾವು ನಮ್ಮ ಆಟೋಗಳನ್ನು ನಿರ್ವಹಿಸುವುದಾದರೂ ಹೇಗೆ? ಸರ್ಕಾರ ಶೀಘ್ರದಲ್ಲೇ ದರಗಳನ್ನು ಪರಿಷ್ಕರಿಸಬೇಕೆಂದು ಆಟೋ ಚಾಲಕರು ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!