ದಿಗಂತ ವರದಿ ವಿಜಯಪುರ:
ನಗರದ ಯೋಗಾಪುರಕ್ಕೆ ಹೋಗೋ ರಸ್ತೆ ಮಧ್ಯೆದ ಮುನಿಶ್ವರ ಭಾಗ ಕಾಲೋನಿ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಭೀತಿ ಮೂಡುವಂತಾಗಿದೆ.
ಇಲ್ಲಿನ ಬಡಾವಣೆಯಲ್ಲಿ ಏಕಾಏಕಿ ಚಿರತೆ ಪ್ರತ್ಯಕ್ಷವಾಗಿದ್ದು, ಇಲ್ಲಿನ ಬಡಾವಣೆಯಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಚಿರತೆ ಓಡಾಟದ ವಿಷಯ ಸುತ್ತಲಿನ ಬಡಾವಣೆಗಳ ಜನರಲ್ಲಿ ಸಂಚಲನ ಮೂಡಿಸಿದ್ದು, ತೀವ್ರ ಆತಂಕಕ್ಕೆ ಎಡೆಯಾಗಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಜನರನ್ನು ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಚಿರತೆ ಸೆರೆ ಹಿಡಿಯಲು ಮುಂದಾಗಿದ್ದಾರೆ.