ಎನಿಟೈಮ್ ಲಿಕ್ಕರ್ ಮೆಷಿನ್‌: ಯಾವ ಬ್ರಾಂಡ್‌ ಬೇಕೋ ಆಯ್ಕೆ ಮಾಡಿ, ಮದ್ಯ ಪಡೆಯಿರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ATM ಎಂದರೆ ಸ್ವಯಂಚಾಲಿತ ಟೆಲ್ಲರ್ ಯಂತ್ರ. ಹಣಕ್ಕಾಗಿ ಎಟಿಎಂ ಯಂತ್ರಗಳನ್ನು ನೋಡಿದ್ದೇವೆ. ಎನಿಟೈಮ್ ಇಡ್ಲಿಗಳ ಮಿಷನ್ ಬಗ್ಗೆ ನಾವು ಕೇಳಿದ್ದೇವೆ. ಹೈದರಾಬಾದಿನಲ್ಲಿ ಎನಿಟೈಮ್ ಬ್ಯಾಗ್ ಮಿಷನ್ ಗಳನ್ನೂ ನೋಡಿದ್ದೇವೆ. ಆದರೆ ಇದೀಗ ಎನಿ ಟೈಮ್‌ ಲಿಕ್ಕರ್‌ ಮೆಷಿನ್‌ ಕೂಡ ಬಂದಿದೆ. ಈ ಮೆಷಿನ್‌ ನೋಡಲು ನೀವು ಚನ್ನೈಗೆ ಹೋಗಬೇಕು.

ತಮಿಳುನಾಡು ಸರ್ಕಾರ ರಾತ್ರಿ ವೇಳೆ ಮದ್ಯ ಖರೀದಿಸಲು ಈ ಯಂತ್ರಗಳನ್ನು ಸ್ಥಾಪಿಸಿದೆ. ಈ ಮದ್ಯ ಮಾರಾಟ ಯಂತ್ರವನ್ನು ಮೊದಲ ಬಾರಿಗೆ ಅಣ್ಣಾನಗರದಲ್ಲಿ (ಶುಕ್ರವಾರ) ಚೆನ್ನೈ ನಗರದ ಮಾಲ್‌ನಲ್ಲಿರುವ ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಟಾಸ್ಮಾಕ್) ಅಂಗಡಿಯಲ್ಲಿ ಸ್ಥಾಪಿಸಲಾಯಿತು. ಮದ್ಯ ಬಳಸುವವರು ತಮ್ಮ ನೆಚ್ಚಿನ ಬ್ರ್ಯಾಂಡ್ ಆಯ್ಕೆ ಮಾಡಿಕೊಂಡು ಈ ಯಂತ್ರಕ್ಕೆ ಹಣ ನೀಡಿದರೆ ಅವರ ಕೈಯಲ್ಲಿ ಮದ್ಯ ಬಾಟಲಿ ಸಿಗುತ್ತದೆ.

ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಷನ್ ಸ್ಥಾಪಿಸಿರುವ ಈ ಯಂತ್ರಗಳಿಂದ ಯಾವುದೇ ಸಮಯದಲ್ಲಿ ಮದ್ಯವನ್ನು ಖರೀದಿಸಬಹುದು. ATM ನಂತೆ ಕೆಲಸ ಮಾಡುವ ಈ ಯಂತ್ರಗಳಲ್ಲಿ ಮೊದಲು ಮೇಲಿನ ಬ್ರಾಂಡ್ ಗಳಿಂದ ಬೇಕಾದ ಬ್ರಾಂಡ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಶೀಘ್ರದಲ್ಲೇ ಯಂತ್ರವು ಬ್ರಾಂಡ್‌ನ ಬೆಲೆಯನ್ನು ತೋರಿಸುತ್ತದೆ. ಮೊತ್ತವನ್ನು ಡಿಜಿಟಲ್ ರೂಪದಲ್ಲಿ (ಆನ್‌ಲೈನ್) ಪಾವತಿಸಿದರೆ ಬಾಟಲಿಯು ಯಂತ್ರದ ಕೆಳಗಿನಿಂದ ಹೊರಬರುತ್ತದೆ. ಈ ಮಿಷನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಸರಕಾರ ಇನ್ನಷ್ಟು ಯಂತ್ರಗಳನ್ನು ಸ್ಥಾಪಿಸಲು ಮುಂದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!