ಆಟೋ ಪೈಲಟ್‌ ನಲ್ಲಿ ದೋಷ: ಟೇಕ್‌ ಆಗಿ ಕೆಲವೇ ಹೊತ್ತಲ್ಲಿ ಮರಳಿದ ಸ್ಪೈಸ್‌ ಜೆಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆಟೋಪೈಲಟ್ ವ್ಯವಸ್ಥೆಯಲ್ಲಿನ ಅಸಮರ್ಪಕ ಕಾರ್ಯದಿಂದಾಗಿ ನಾಸಿಕ್‌ಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನವು ಗುರುವಾರ ಬೆಳಗ್ಗೆ ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ ದೆಹಲಿಗೆ ಮರಳಿದೆ ಎಂದು ಮೂಲಗಳು ವರದಿ ಮಾಡಿವೆ.

ಸ್ಪೈಸ್‌ಜೆಟ್‌ನ SG-8363 ವಿಮಾನವು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 6:54 ಕ್ಕೆ ಟೇಕಾಫ್ ಆಗಿತ್ತು ಆದರೆ ಆಟೋಪೈಲಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅದನ್ನು ಪುನಃ ದೆಹಲಿಯೆಡೆಗೆ ತಿರುಗಿಸಲಾಯಿತು. ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದು ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ..

ಇತ್ತೀಚಿನ ದಿನಗಳಲ್ಲಿ ಸ್ಪೈಸ್‌ ಜೆಟ್‌ ವಿಮಾನಗಳಲ್ಲಿ ದೋಷ ಕಾಣಿಸಿಕೊಳ್ಳುತ್ತಿದ್ದು ಈ ಪ್ರಕರಣ ಅವುಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ. ಪ್ರಸ್ತುತ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಆದೇಶದಂತೆ ಸ್ಪೈಸ್‌ಜೆಟ್ ನ ಶೇಕಡಾ 50 ಕ್ಕಿಂತ ಹೆಚ್ಚು ವಿಮಾನಗಳು ಕಾರ್ಯ ನಿರ್ವಹಿಸುತ್ತಿಲ್ಲ. ಜೂನ್ 19-ಜುಲೈ 5 ರ ಅವಧಿಯಲ್ಲಿ ಅದರ ವಿಮಾನಗಳು ಕನಿಷ್ಠ ಎಂಟು ತಾಂತ್ರಿಕ ಅಸಮರ್ಪಕ ಘಟನೆಗಳಲ್ಲಿ ಭಾಗಿಯಾಗಿದ್ದರಿಂದ ನಿಯಂತ್ರಕವು ಜುಲೈನಲ್ಲಿ ಎಂಟು ವಾರಗಳ ಅವಧಿಗೆ ಸ್ಪೈಸ್‌ ಜೆಟ್‌ ಏರ್‌ಲೈನ್‌ನ ವಿಮಾನಗಳ ಮೇಲೆ ನಿರ್ಬಂಧವನ್ನು ವಿಧಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!