ʻನನ್ನ ಮದುವೆಯಾಗುʼ ಎಂದು ರಸ್ತೆಯಲ್ಲಿ ಯುವಕನ ಹಿಂದೆ ಓಡಿದ ಯುವತಿ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ನನ್ನನ್ನು ಮದುವೆಯಾಗು’ ಎಂದು ಅಳುತ್ತಾ ರಸ್ತೆಯಲ್ಲಿ ಯುವಕನೊಬ್ಬನ ಹಿಂದೆ ಯುವತಿ ಓಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಬಿಹಾರದ ನವಾಡದ ಭಗತ್ ಸಿಂಗ್ ಚೌಕ್ ನಲ್ಲಿ ಈ ಘಟನೆ ನಡೆದಿದೆ. ಮೂರು ತಿಂಗಳ ಹಿಂದೆ ಇಬ್ಬರಿಗೂ ನಿಶ್ಚಿತಾರ್ಥ ನಡೆದಿತ್ತು. ಮಗಳ ಪೋಷಕರು ಮದು ಮಗನಿಗೆ ವರದಕ್ಷಿಣೆಯಾಗಿ ಬೈಕ್ ಹಾಗೂ 50 ಸಾವಿರ ರೂಪಾಯಿ ನೀಡಿದ್ದಾರೆ. ಆದರೆ ಕಾರಣ ನೀಡುತ್ತಾ ವರ ಮದುವೆಯನ್ನು ಮುಂದೂಡುತ್ತಿದ್ದಾನೆ.

ಹಿರಿಯರು ಮತ್ತೊಮ್ಮೆ ಮದುವೆಗೆ ವ್ಯವಸ್ಥೆ ಮಾಡಿದರೂ ಸಹ ಮದುವೆಗೆ ಬಾರದೆ ತಪ್ಪಿಸಿಕೊಂಡಯ ಓಡಾಡುತ್ತಿದ್ದಾನೆ. ಮಾರುಕಟ್ಟೆಯಲ್ಲಿ ಅವನನ್ನು ಗುರುತಿಸಿದ ವಧು ಅವನನ್ನು ಹಿಂಬಾಲಿಸಿ ನನ್ನನ್ನು ಮದುವೆಯಾಗು ಎಂದು ಬೇಡಿಕೊಂಡಿದ್ದಾಳೆ. ನನಗೆ ನೀನು ಬೇಡ ಎಂದು ಓಡುತ್ತಿದ್ದ ಯುವಕನ್ನು ಪೊಲೀಸರು ಠಾಣೆಗೆ ಕರೆದೊಯ್ದು ಕೌನ್ಸೆಲಿಂಗ್ ನೀಡಿ ಕಳುಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!