Wednesday, September 27, 2023

Latest Posts

VIRAL VIDEO| ವಾರೆ ವ್ಹಾ! ಆಟೋ ಡ್ರೈವರ್‌ ಐಡಿಯಾ ಸೂಪರೋ…ಸೂಪರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಯಾರಿಗೂ ಬರದ ಐಡಿಯಾಗಳು ಬಂದರೂ.. ಯಾರೂ ಮಾಡದ ಕೆಲಸ ಮಾಡಿದರೂ ಇಷ್ಟವಾದರೆ ಮಾತ್ರ ಮನ್ನಣೆ ಗ್ಯಾರೆಂಟಿ. ಇದೀಗ ಸುಡು ಬಿಸಿಲಿನಲ್ಲಿ ಆಟೋ ಹತ್ತುವ ಪ್ರಯಾಣಿಕರಿಗೆ ಆಟೋ ಚಾಲಕನೊಬ್ಬನಿಗೆ ಒಂದು ಐಡಿಯಾ ಬಂತು..ಈ ಐಡಿಯಾ ನೋಡಿದ ಜನ ಇನ್ನು ಇವರ ಆಟೋ ಹತ್ತುವುದಿಲ್ಲವೇ?

ಬಿಸಿಲಿನಲ್ಲಿ ತುರ್ತಾಗಿ ಹೊರ ಹೋಗಬೇಕಾದರೆ ಸ್ವಂತ ವಾಹನ, ಇಲ್ಲವಾದರೆ ಬಸ್, ಆಟೋ ಹತ್ತಿ ಹೋಗಬೇಕು. ಏನೇ ಆಗಲಿ ಸುಡು ಬಿಸಿಲು ಝಳಪಿಸುತ್ತಿದ್ದರೆ ಪಯಣ ನೀರಸವಾಗಿರುತ್ತದೆ. ಬಿಸಿಲಿನ ಭಯದಿಂದ ಬರುವ ಪ್ರಯಾಣಿಕರು ತಣ್ಣಗಿರಲೆಂದು ಚಾಲಕನೊಬ್ಬ ತನ್ನ ಆಟೋದಲ್ಲಿ ಕೂಲರ್ ಫಿಕ್ಸ್ ಮಾಡಿದ್ದಾರೆ.

‘ಎಂಜಿನಿಯರ್ ಬಹುಶಃ ಆಟೋ ಡ್ರೈವರ್ ಆಗಿದ್ದಾನೇನೋ’ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.. ‘ಆಟೋ ಚಾಲಕನ ಬುದ್ಧಿವಂತಿಕೆಗೆ ನಾವು ಸೆಲ್ಯೂಟ್ ಹೊಡೆಯಬೇಕು’. ಬೇಸಿಗೆ ಬಂತೆಂದರೆ ಎಷ್ಟೋ ಜನ ಈ ಆಟೋಡ್ರೈವರ್ ಐಡಿಯಾ ಫಾಲೋ ಮಾಡಿದರೂ ಆಶ್ಚರ್ಯವಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!