ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಸಾಕ್ಷ್ಯಚಿತ್ರ ನಾಳೆ ಪ್ರಸಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

100 ಸಂಚಿಕೆ ಪೂರ್ಣಗೊಳಿಸಿರುವ ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಪ್ರಭಾವ ಕುರಿತ ಸಾಕ್ಷ್ಯಚಿತ್ರ ನಾಳೆ ಪ್ರಸಾರವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೊ ಕಾರ್ಯಕ್ರಮವಾದ ‘ಮನ್ ಕಿ ಬಾತ್’ ಕಾರ್ಯಕ್ರಮ 100 ಸಂಚಿಕೆಗಳ ಮೈಲಿಗಲ್ಲು ಪೂರ್ಣಗೊಳಿಸಿದ ಕಾರಣ, ಅದರ ಪ್ರಭಾವದ ಕುರಿತ ವಿಶೇಷ ಸಾಕ್ಷ್ಯಚಿತ್ರ ‘ಮನ್ ಕಿ ಬಾತ್: ಭಾರತ್ ಕಿ ಬಾತ್’ ಶುಕ್ರವಾರ(ಜೂನ್ 2) ರಾತ್ರಿ 8 ಗಂಟೆಗೆ HistoryTV18 ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

2014 ರಲ್ಲಿ ಮೋದಿಯವರ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮವು ಹೇಗೆ ಪ್ರಾರಂಭವಾಯಿತು. ಈ ಸರಳವಾದ ಕಲ್ಪನೆಯು ಸಂವಾದದ ಮೂಲಕ ದೇಶದ ಮೂಲೆ ಮೂಲೆಗಳನ್ನು ಹೇಗೆ ಸಂಪರ್ಕಿಸಲು ಸಾಧ್ಯವಾಯಿತು ಎಂಬ ಕಥೆಯನ್ನು ಚಿತ್ರವು ಹೇಳುತ್ತದೆ.

ಈ ಸಾಕ್ಷ್ಯಚಿತ್ರವು ನಾಗರಿಕರನ್ನು ಮತ್ತು ಪ್ರಧಾನ ಮಂತ್ರಿಗೆ ಸ್ಫೂರ್ತಿ ನೀಡಿದ ಕಥೆಗಳನ್ನು ಸಹ ಬಿತ್ತರಿಸಲಿದೆ. ಈ ಸಂವಹನ ವೇದಿಕೆಯು ಹಳ್ಳಿಗಳಲ್ಲಿ ವಾಸಿಸುವವರಿಂದ ಹಿಡಿದು ಕಿಕ್ಕಿರಿದ ನಗರಗಳವರೆಗೆ ಎಲ್ಲೆಡೆ ಭಾರತೀಯರ ಜೀವನದ ಮೇಲೆ ಬೀರಿದ ಪ್ರಭಾವವನ್ನು ಪ್ರತಿಬಿಂಬಿಸಿದೆ.

ಕೊರೊನಾವೈರಸ್ ಸಾಂಕ್ರಾಮಿಕ ಅತ್ಯಂತ ತೀವ್ರವಾಗಿದ್ದ ಸಮಯದಲ್ಲಿ, ಭಯವನ್ನು ಕಡಿಮೆ ಮಾಡಲು ಮತ್ತು ಅಧಿಕೃತ ನಿಜವಾದ ಮಾಹಿತಿಯನ್ನು ಪ್ರಸಾರ ಮಾಡಲು ‘ಮನ್ ಕಿ ಬಾತ್’ ಸಹಕರಿಸಿತ್ತು. ಈ ರೀತಿಯಾಗಿ ಸಮಗ್ರ ಮಾಹಿತಿ ಒಳಗೊಂಡ ‘ಮನ್ ಕಿ ಬಾತ್’ ಪ್ರಭಾವದ ಕುರಿತಾಗಿ ಸಾಕ್ಷ್ಯಚಿತ್ರದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!