ಅವತಾರ್‌ ಅಬ್ಬರಕ್ಕೆ ಬಾಕ್ಸ್‌ ಆಫೀಸ್‌ ಧೂಳಿಪಟ: ಮೂರೇ ದಿನಕ್ಕೆ ಬರೋಬ್ಬರಿ 3,598 ಕೋಟಿ ರೂ. ಕಲೆಕ್ಷನ್.‌.!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಡಿ.16 ರಂದು ಬಿಡುಗಡೆಯಾದ ಅವತಾರ್: ದಿ ವೇ ಆಫ್ ವಾಟರ್ ವಿಶ್ವಾದ್ಯಂತ ಹೊಸ ಸಂಚಲನ ಸೃಷ್ಟಿಸಿದೆ. ಬಿಡುಗಡೆಯಾದ ಆರಂಭಿಕ ವಾರಾಂತ್ಯದಲ್ಲಿ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 435 ಮಿಲಿಯನ್ ಡಾಲರ್ (ಸುಮಾರು ರೂ. 3,598 ಕೋಟಿ) ಸಂಗ್ರಹಿಸುವ ಮೂಲಕ ಬಾಕ್ಸ್‌ ಆಫೀಸ್‌ ಉಡಾಯಿಸಿದೆ.
ಭಾರತ ಸೇರಿದಂತೆ ಅಮೆರಿಕದ ಹೊರಗಿನ ಮಾರುಕಟ್ಟೆಗಳಿಂದ $301 ಮಿಲಿಯನ್ (ಸುಮಾರು ರೂ. 2,490 ಕೋಟಿ) ಸಂಗ್ರಹಿಸಿದೆ. ಈ ಮೂಲಕ ಕೊರೋನಾ ಸಾಂಕ್ರಾಮಿಕ ರೋಗದ ನಂತರ ಹಾಲಿವುಡ್‌ ಚಿತ್ರರಂಗ ಮತ್ತೊಮ್ಮೆ ಮೈಕೊಡವಿ ಮೇಲೆದ್ದಿದೆ. ಆದರೆ ಅಚ್ಚರಿಯೆಂಬಂತೆ ಅವತಾರ್ ಅಮೆರಿಕ ಹಾಗೂ ಕೆನಡಾದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ.
ಡಿಸ್ನಿ ಪ್ರಕಾರ, ಭಾರತದಲ್ಲಿ ಅವತಾರ್ 2 ರೂ. ಅದರ ಆರಂಭಿಕ ವಾರಾಂತ್ಯದಲ್ಲಿ 160 ಕೋಟಿ ರೂ. ಗಳಿಸುವ ಮೂಲಕ ಈ ಹಿಂದೆ ʼಡಾಕ್ಟರ್ ಸ್ಟ್ರೇಂಜ್‌ʼ ಮಲ್ಟಿವರ್ಸ್ ಆಫ್ ಮ್ಯಾಡ್‌ನೆಸ್‌ʼನ 126.94 ಕೋಟಿ ಸಂಗ್ರಹವನ್ನು ದಾಟಿದೆ. ಅವತಾರ್-‌ 2 ನಿರ್ಮಾಣಕ್ಕೆ ಸುಮಾರು $400 ಮಿಲಿಯನ್ (ಸುಮಾರು ರೂ. 3,310 ಕೋಟಿ) ವೆಚ್ಚಮಾಡಲಾಗಿತ್ತು. ಅಲ್ಲಿಗೆ ಚಿತ್ರ ಮೊದಲವಾರದಲ್ಲೇ ಬಂಡವಾಳ ಚುಕ್ತ ಮಾಡಿ ಲಾಭಗಳಿಕೆಯತ್ತ ದಾಪುಗಾಲಿಟ್ಟಿದೆ.
ಅವತಾರ್: ದಿ ವೇ ಆಫ್ ವಾಟರ್ ಮೊದಲ ಅವತಾರ್‌ ಚಲನಚಿತ್ರ ಬಿಡುಗಡೆಯಾದ 15 ವರ್ಷಗಳ ನಂತರ ಬಂದಿದೆ. ಜೇಕ್ ಸುಲ್ಲಿ (ಸ್ಯಾಮ್ ವರ್ಥಿಂಗ್ಟನ್) ಮತ್ತು ನೆಯ್ಟಿರಿ (ಜೊಯ್ ಸಲ್ಡಾನಾ) ಐದು ಮಕ್ಕಳಿಗೆ ಪೋಷಕರಾಗಿ, ವಿಲಕ್ಷಣ ಚಂದ್ರ ಪಂಡೋರಾದ ಸೊಂಪಾದ ಕಾಡುಗಳಲ್ಲಿ ಬದುಕುಳಿಯುವುದನ್ನು ಚಿತ್ರಕತೆಯಲ್ಲಿ ತೋರಿಸಲಾಗಿದೆ. ಈ ಬಾರಿ ನೀರಿನಲ್ಲಿ ಅದ್ಭುತ ಲೋಕವನ್ನು ಸೃಷ್ಟಿಸಲಾಗಿದೆ.
ಅವತಾರ್: ದಿ ವೇ ಆಫ್ ವಾಟರ್ ಭಾರತದಲ್ಲಿನ ಚಿತ್ರಮಂದಿರಗಳಲ್ಲಿ ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!