ಮಕ್ಕಳ ಕೈಗೆ ರಿಮೋಟ್ ಕೊಡಬೇಡಿ! ರಿಮೋಟ್ ಬ್ಯಾಟರಿ ನುಂಗಿದ ಎರಡು ವರ್ಷದ ಮಗು..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳಿಗೆ ಆಟಿಕೆ ರೀತಿ ರಿಮೋಟ್ ನೀಡ್ತೀರಾ? ರಿಮೋಟ್ ಆಟಿಕೆಯಲ್ಲ, ಮಕ್ಕಳು ಬ್ಯಾಟರಿ ನುಂಗಿದರೆ ಏನಾಗುತ್ತದೆ ನೋಡಿ..

ತಿರುವನಂತಪುರಂನಲ್ಲಿ ಎರಡು ವರ್ಷದ ಮಗು ರಿಮೋಟ್ ಬ್ಯಾಟರಿ ನುಂಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ. ರಿಶಿಕೇಶ್ ಬ್ಯಾಟರಿ ಜತೆ ಆಟ ಆಡುತ್ತಾ ಬ್ಯಾಟರಿ ನುಂಗಿದ್ದಾನೆ. ತಕ್ಷಣ ಪೋಷಕರು ಆಸ್ಪತ್ರೆಗೆ ಧಾವಿಸಿದ್ದು, ತಕ್ಷಣವೇ ಎನ್‌ಐಎಂಎಸ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ.

ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಬ್ಯಾಟರಿ ಹೊರತೆಗೆಯಲಾಗಿದೆ. ಮಕ್ಕಳಿಗೆ ಆಟಿಕೆಯಾಗಿ ಈ ವಸ್ತುವನ್ನು ನೀಡಬೇಡಿ ಎಂದು ವೈದ್ಯರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!