ಹುರಿದ ಕಡಲೆಯನ್ನು ತಿಂದ ತಕ್ಷಣ ನೀರು ಕುಡಿಯಬೇಡಿ. ನೀರು ಕುಡಿದರೆ ಕಡಲೆ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.
ಪೇರಳೆ ಹಣ್ಣು ತಿಂದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಬಿಡುಗಡೆಯಾಗುತ್ತದೆ. ಬೀಜಗಳು ಸರಿಯಾಗಿ ಜೀರ್ಣವಾಗುವುದಿಲ್ಲ ಮತ್ತು ಹೊಟ್ಟೆ ನೋವನ್ನು ಉಂಟುಮಾಡುತ್ತದೆ.
ಐಸ್ ಕ್ರೀಮ್ ತಿಂದ ತಕ್ಷಣ ನೀರು ಕುಡಿಯಬೇಡಿ. ಇದರಿಂದ ಹಲ್ಲು ನೋವು ಮತ್ತು ಗಂಟಲು ನೋವು ಉಂಟಾಗುತ್ತದೆ. ಆದ್ದರಿಂದ, ಐಸ್ ಕ್ರೀಮ್ ತಿಂದ 10 ನಿಮಿಷಗಳ ನಂತರ ನೀರು ಕುಡಿಯಿರಿ.
ಟೀ, ಕಾಫಿ ಕುಡಿದ ತಕ್ಷಣ ನೀರು ಕುಡಿಯಬೇಡಿ. ಇದರಿಂದ ಜೀರ್ಣಾಂಗ ವ್ಯವಸ್ಥೆಯು ಮಲವನ್ನು ಸರಿಯಾಗಿ ಹೊರಹಾಕುವುದಿಲ್ಲ.
ಬಾಳೆಹಣ್ಣು, ಸಪೋಟ, ಸೇಬು, ಅನಾನಸ್, ದಾಳಿಂಬೆ ಇತ್ಯಾದಿ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.