ಅಪ್ಪಿತಪ್ಪಿಯೂ ರಾತ್ರಿ ಈ ಆಹಾರವನ್ನು ಸೇವಿಸಲೇ ಬೇಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಅಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರಿಗೂ ಇರುವ ಬಹುಮುಖ್ಯ ಸಮಸ್ಯೆ ನಿದ್ರಾಹೀನತೆ. ರಾತ್ರಿ ನಿದ್ರೆ ಬರೋದಿಲ್ಲ…ಈ ಸಮಸ್ಯೆ ಸಾಮಾನ್ಯ. ನಿದ್ರಾಹೀನತೆ ನಮ್ಮ ದೇಹದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತದೆ. ಸರಿಯಾಗಿ ನಿದ್ರೆ ಮಾಡದ ವ್ಯಕ್ತಿ ಕಾಯಿಲೆಗಳ ದಾಸನಾಗುವುದರಲ್ಲಿ ಸಂದೇಹವೇ ಇಲ್ಲ. ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವುದರ ಜೊತೆಗೆ ಅನೇಕ ರೀತಿಯ ಮಾರಣಾಂತಿಕ ರೋಗಗಳಿಗೂ ಈ ನಿದ್ರಾ ಹೀನತೆ ಕಾರಣವಾಗುತ್ತದೆ. ಖಿನ್ನತೆ, ವಿವಿಧ ರೀತಿಯ ಕ್ಯಾನ್ಸರ್ ಮೊದಲಾದ ರೋಗಗಳು ದೇಹವನ್ನಾವರಿಸಲು ನಿದ್ರಾಹೀನತೆಯೂ ಒಂದು ಕಾರಣ. ಸರಿಯಾಗಿ ನಿದ್ರೆ ಬಾರದೆ ಇರುವುದಕ್ಕೆ ನಮ್ಮ ಆಹಾರ ವ್ಯವಸ್ಥೆಯೂ ಬಹುಮುಖ್ಯವಾಗುತ್ತದೆ ಎಂಬುದು ಅನೇಕರಿಗೆ ತಿಳಿದೇ ಇಲ್ಲ. ನಾವು ಸೇವಿಸುವ ಆಹಾರ, ಪಾನೀಯಗಳು ನಮ್ಮ ನಿದ್ದೆಯನ್ನು ಹೊಡೆದೋಡಿಸುವಂತಿರಬಾರದು. ಈ ಬಗ್ಗೆ ಎಚ್ಚರ ವಹಿಸುವುದು ಅತೀ ಅವಶ್ಯ.

ನಿಮಗೆ ರಾತ್ರಿ ಸರಿಯಾಗಿ ನಿದ್ರೆ ಬರ್ತಾ ಇಲ್ವಾ? ನೀವು ಈ ವಸ್ತುಗಳನ್ನು ಸೇವಿಸ್ತಿದ್ದೀರಾ ಎಂದೊಮ್ಮೆ ಪರೀಕ್ಷಿಸಿಕೊಳ್ಳಿ.  ತಂಪುಪಾನೀಯ, ಕಾಫಿ,ಚಹಾ,ಚಾಕೋಲೇಟ್,ಕೆಲವೊಂದು ಪೈನ್ ಕಿಲ್ಲರ್‌ಗಳಲ್ಲಿಯೂ ‘ಕೆಫೀನ್’ ಅಂಶಗಳಿದ್ದು ಅಂತಹವುಗಳನ್ನು ಸೇವಿಸಲೇ ಬಾರದು. ಇದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಟೊಮ್ಯಾಟೋ ಹಣ್ಣು ತಿನ್ನುವುದು ಕೂಡಾ ನಿದ್ರಾಬಂಗಕ್ಕೆ ಕಾರಣವಾಗುತ್ತದೆ. ಟೊಮ್ಯಾಟೋ ಹಣ್ಣಿನಲ್ಲಿರುವ ರಾಸಾಯನಿಕ ಅಂಶಗಳು ಜೀರ್ಣಕ್ರಿಯೆಗೆ ಸಹಕಾರಿಯಾಗದೆ ಅಜೀರ್ಣ ಸಮಸ್ಯೆಯುಂಟಾಗಿ ಸರಿಯಾಗಿ ನಿದ್ರೆ ಮಾಡಲು ತೊಂದರೆ ನೀಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!