ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ 12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಂಡಿದೆ. ಈ ಬಗ್ಗೆ ಗೂಗಲ್ ಕೂಡ ತನ್ನ ವಿಶೇಷ ಡೂಡಲ್ ಮೂಲಕ ಸಂತಸ ಹಂಚಿಕೊಂಡಿದೆ.
ಇಂದು ಮೊದಲ ದಿನ ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ನ ಮಹಿಳಾ ಕ್ರಿಕೆಟ್ ತಂಡ ಪಂದ್ಯ ಆರಂಭಿಸಿವೆ. ಇಂದಿನಿಂದ ಏ.3ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿವೆ.
ಈ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಬಾಂಗ್ಲಾದೇಶ, ಭಾರತ, ಇಂಗ್ಲೆಂಡ್, ಪಾಕಿಸ್ತಾನ, ದ.ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಭಾಗವಹಿಸಲಿವೆ.
12ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗುವ ತಂಡಕ್ಕೆ 10 ಕೋಟಿ ರೂ. ಅಂದರೆ 1.32 ಮಿಲಿಯನ್ ಡಾಲರ್ ನೀಡಲಿದೆ. ರನ್ನರ್ ಅಪ್ ತಂಡಕ್ಕೆ 4.51 ಕೋಟಿ ರೂ. ಸಿಗಲಿದೆ ಎಂದು ಐಸಿಸಿ ತಿಳಿಸಿದೆ.
ಗೂಗಲ್ ನ ಡೂಡಲ್ ನಲ್ಲಿ ನಾಲ್ವರು ಆಟಗಾರರು ಆಡುತ್ತಿದ್ದು, ಉಳಿದ ಇಬ್ಬರು ಚೀರ್ಸ್ ಮಾಡುತ್ತಿರುವಂತೆ ವಿಶೇಷವಾದ ಡೂಡಲ್ ರೂಪುಗೊಂಡಿದೆ.
New Google Doodle has been released: "Women's Cricket World Cup 2022 Begins!" 🙂#google #doodle #designhttps://t.co/oM7i79OJ1E pic.twitter.com/UeRDYk14qt
— Google Doodles EN (@Doodle123_EN) March 3, 2022