ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಶ್ರೀಲಂಕಾದ ನಡುವಿನ ಮೊದಲ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಆರಂಭವಾಗಿದೆ.
ಇದು ವಿರಾಟ್ ಕೊಹ್ಲಿ 100ನೇ ಟೆಸ್ಟ್ ಮ್ಯಾಚ್ ಆಗಿದ್ದು, ಎಲ್ಲರ ಕಣ್ಣು ಕೊಹ್ಲಿ ಆಟದ ಮೇಲಿದೆ. ಮೊದಲಿಗೆ ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿದೆ. ಟಿ20 ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಕ್ಲೀನ್‌ಸ್ವೀಪ್ ಮಾಡಿರೋ ಟೀಂ ಇಂಡಿಯಾ ಇಂದಿನ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಗೆದ್ದು ಬೀಗುವ ತವಕದಲ್ಲಿದೆ. ಈಗಾಗಲೇ ಸೋಲು ಅನುಭವಿಸಿರುವ ಶ್ರೀಲಂಕಾ ತಂಡಕ್ಕೆ ಜಯ ಸಾಧಿಸಬೇಕಿದೆ.
ಮೊದಲು ಬ್ಯಾಟಿಂಗ್ ಮಾಡ್ತೇವೆ, ಟೀಂ ಇಂಡಿಯಾ ಕ್ಯಾಪ್ಟನ್ ಎನ್ನುವುದು ದೊಡ್ಡ ಗೌರವ. ಹಾಗೇ ವಿರಾಟ್‌ಗೆ ಆಲ್ ದಿ ಬೆಸ್ಟ್ ನೂರು ಪಂದ್ಯ ಆಡುವುದು ದೊಡ್ಡ ಸಾಧನೆಯಾಗಿದೆ ಎಂದಿದ್ದಾರೆ.