ಹೊಸದಿಗಂತ ವರದಿ ಶಿರಸಿ :
ವಿಧಾನ ಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಜನತಾ ವಿದ್ಯಾಲಯ ಕುಳವೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಶಿರಸಿ ತಾಲೂಕಿನ ಕುಳುವೆಯ ಜನತಾ ಪ್ರೌಢಶಾಲೆಗೆ ತಮ್ಮ ಕುಟುಂಬಸ್ಥರೊಂದಿಗೆ ಆಗಮಿಸಿದ ಕಾಗೇರಿ, ಪತ್ನಿ ಭಾರತಿ ಹೆಗಡೆ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮತದಾನ ಮಾಡಿದರು.
ನಂತರ ಮಾತನಾಡಿದ ಕಾಗೇರಿ, ಮತದಾರಲ್ಲಿ ಈ ಚುನಾವಣೆ ಪ್ರಾಮುಖ್ಯತೆ, ಮಹತ್ವ ಅರಿವು ಹೆಚ್ಚಾಗುತ್ತಿದೆ. ಮತದಾತು ದೊಡ್ಡ ಪ್ರಮಾಣದಲ್ಲಿ ಮತದಾನ ಮಾಡುತ್ತಿದ್ದಾರೆ. ಪ್ರಚಾರ ಕಾರ್ಯ ಚೆನ್ನಾಗಿದೆ ಆಗಿದೆ. ಬಿಜೆಪಿ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸದಾಗಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ ಕಾರ್ಯಕರ್ತರನ್ನ ಅಭಿನಂದಿಸಬೇಕು. ಎಲ್ಲಾ ಹಂತದ ಪ್ರಮುಖರು ರಾಜ್ಯ- ರಾಷ್ಷ್ಟ ನಾಯಕರು ಪ್ರಚಾರಕ್ಕೆ ವೇಗ ತಂದಿದ್ದಾರೆ. ಮತದಾರು ಹೆಚ್ಚನ ಸಂಖ್ಯೆಯಲ್ಲಿ ಕಮಲಕ್ಕೆ ಮತ ನೀಡಿ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ದಿ ಸಾಧ್ಯ. ಈ ಬಾರಿ ಚುನಾವಣೆಯಲ್ಲಿ ದಾಖಲೆಯ ಮತಗಳಿಂದ ಗೆಲುವು ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.