ಗಾಬಿತವಾಡದಲ್ಲಿ ಕರಾವಳಿ ಕಡಲ ತೀರಗಳ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ

 ಹೊಸದಿಗಂತ ವರದಿ,ಅಂಕೋಲಾ:

ರೀಪ್ ವಾಚ್ ಸಾಗರ ಸಂರಕ್ಷಣಾ ಕೇಂದ್ರ ಮತ್ತು ಆನ್ ಅರ್ಥ್ ಫೌಂಡೇಶನ್ ಗೋವಾ ಇವರ ಆಶ್ರಯದಲ್ಲಿ ಎಚ್. ಸಿ.ಎಲ್ ಫೌಂಡೇಶನ್ ಸಹಯೋಗದಲ್ಲಿ ತಾಲೂಕಿನ ಗಾಬಿತವಾಡ ಕಡಲ ತೀರದಲ್ಲಿ ಕರಾವಳಿ ಕಡಲ ತೀರಗಳ ಸಂರಕ್ಷಣೆ ಕುರಿತಂತೆ ಸಮುದಾಯ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಸ್ಥಳೀಯ ಮೀನುಗಾರರ ಸಮುದಾಯದಿಂದ ಸಂಗ್ರಹಿಸಿದ್ದ ಕಡಲ ತೀರದಲ್ಲಿ ಸಮುದ್ರದಿಂದ ಎಸೆಯಲ್ಪಟ್ಟ ಮೀನುಗಾರಿಕೆ ಬಲೆಗಳ ತುಂಡುಗಳನ್ನು ಪರಿವರ್ತಿಸಿ ತಯಾರಿಸಲಾದ ಬೆಂಚುಗಳನ್ನು ಮತ್ತು ಮೇಜುಗಳನ್ನು ಕಡಲ ತೀರದ ಸಮುದಾಯ ವಸತಿ ಪ್ರದೇಶದಲ್ಲಿ ಅಳವಡಿಸಲಾಯಿತು.

ಉಪ ವಲಯ ಅರಣ್ಯಾಧಿಕಾರಿ ರಾಜೇಶ ನಾಯ್ಕ ಮಾತನಾಡಿ ಕಡಲನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ದಿಶೆಯಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಮೀನುಗಾರ ಪ್ರಮುಖ ಜ್ಞಾನೇಶ್ವರ ಹಳನಕರ್, ರಾಮದತ್ತ ಗಂಟೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಂಜುನಾಥ ಟಾಕೇಕರ ಮಾತನಾಡಿದರು.

ಶಾಸ್ವತ ಮೀನುಗಾರಿಕೆ ಅಭ್ಯಾಸಗಳು, ಸಮುದ್ರ ಜೀವ ವೈವಿಧ್ಯತೆ, ಕರಾವಳಿ ಸಂರಕ್ಷಣೆಯಲ್ಲಿ ಮೀನುಗಾರರ ಪಾತ್ರ ಮೊದಲಾದ ವಿಷಯಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚೆ ನಡೆಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!