Saturday, April 1, 2023

Latest Posts

ಆಯಾ ರಾಮ್‌, ಗಯಾ ರಾಮ್‌ ಮನಸ್ಥಿತಿಯವರಿಗೆ ಸಾಥ್‌ ನೀಡುವುದಿಲ್ಲ: ನಿತೀಶ್‌ ಗೆ ಬಿಜೆಪಿ ಬಾಗಿಲು ಶಾಶ್ವತವಾಗಿ ಮುಚ್ಚಿದೆ ಎಂದ ಶಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ವಾಗ್ದಾಳಿ ನಡೆಸಿದ್ದಾರೆ.
ನಿತೀಶ್‌ ಕುಮಾರ್‌ ಅವರಿಗೆ ಬಿಜೆಪಿಯ ಬಾಗಿಲು ಶಾಶ್ವತವಾಗಿ ಮುಚ್ಚಿದೆ ಎಂದು ಪಶ್ಚಿಮ ಚಂಪಾರಣ್‌ ಜಿಲ್ಲೆಯ ಲೌರಿಯಾದಲ್ಲಿ ನಡೆದ ರ‍್ಯಾಲಿ ವೇಳೆ ಘೋಷಿಸಿದ್ದಾರೆ.

ಜಯಪ್ರಕಾಶ್‌ ನಾರಾಯಣ್‌ ಚಳವಳಿಯ ಕಾಲದಿಂದಲೂ ನಿತೀಶ್‌ ಕುಮಾರ್‌ ಅವರು ಕಾಂಗ್ರೆಸ್‌ ಹಾಗೂ ಜಂಗಲ್‌ರಾಜ್‌ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ, ಅವರು ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಅವರು ವಿಕಾಸವಾದಿ ಆಗುವ ಬದಲು ಅವಕಾಶವಾದಿಯಾಗಿ ಬದಲಾಗಿದ್ದಾರೆ. ಹಾಗಾಗಿ, ಬಿಜೆಪಿಯ ಬಾಗಿಲು ಅವರಿಗೆ ಶಾಶ್ವತವಾಗಿ ಮುಚ್ಚಿದೆ. ಆಯಾ ರಾಮ್‌, ಗಯಾ ರಾಮ್‌ ಮನಸ್ಥಿತಿಯವರಿಗೆ ನಾವು ಸಾಥ್‌ ನೀಡುವುದಿಲ್ಲ ಎಂದು ಹೇಳಿದರು.

ಬಿಹಾರದಲ್ಲಿ ಜೆಡಿಯು ಹಾಗೂ ಆರ್‌ಜೆಡಿಯ ಮೈತ್ರಿಯು ಅಪವಿತ್ರವಾಗಿದೆ. ಇದು ಎಣ್ಣೆ ಹಾಗೂ ನೀರು ಮಿಶ್ರಣ ಮಾಡಿದಂತಾಗಿದೆ. ಆದರೆ, ಅದು ಎಂದಿಗೂ ಮಿಶ್ರಣವಾಗುವುದಿಲ್ಲ. ಮತ್ತೊಂದು ಅವಧಿಗೆ ನೀವೇ ಸಿಎಂ ಎಂಬುದಾಗಿ ಮೋದಿ ಅವರು ಘೋಷಿಸಿದರೂ ನಿತೀಶ್‌ ಕುಮಾರ್‌ ಅವರು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ, ಮುಂಬರುವ ಚುನಾವಣೆಯಲ್ಲಿ ಗೆದ್ದು, ಬಿಜೆಪಿಯೇ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!