‘ಇದು ತೇಜಸ್ ಎಕ್ಸ್‌ಪ್ರೆಸ್’: ಫೋಟೋ ಹಂಚಿಕೊಂಡ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ರೈಲ್ವೆ ಇಲಾಖೆಯು ಹಲವಾರು ಹೊಸ ಯೋಜನೆಗಳು ಜಾರಿಯಾಗುವ ಮೂಲಕ ಅಭಿವೃದಿಯತ್ತ ಸಾಗುತ್ತಿದೆ.
ಅದೇ ರೀತಿ ಕನಸಿನ ತೇಜಸ್ ಎಕ್ಸ್‌ಪ್ರೆಸ್ (Tejas Express) ರೈಲು.

ತೇಜಸ್ ಎಕ್ಸ್‌ಪ್ರೆಸ್ ಭಾರತದಲ್ಲಿ ಪರಿಚಯಿಸಲಾದ ಮೊದಲ ಸೆಮಿ-ಹೈ-ಸ್ಪೀಡ್ ಹವಾನಿಯಂತ್ರಿತ ರೈಲು. ಇದು ಸ್ವಯಂಚಾಲಿತ ಬಾಗಿಲುಗಳೊಂದಿಗೆ ಆಧುನಿಕ ಆನ್‌ಬೋರ್ಡ್ ಸೌಲಭ್ಯಗಳನ್ನು ಹೊಂದಿದೆ. ಇದರ ಫೋಟೋವನ್ನು ರೈಲ್ವೆ ಸಚಿವರಾಗಿರುವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಹಂಚಿಕೊಂಡಿದ್ದಾರೆ.

ತೇಜಸ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಇರುವ ಹಿಂದೆ ಸರಿಸಿಕೊಳ್ಳಬಹುದಾದಂತಹ ಸೀಟುಗಳ ಫೋಟೋವನ್ನು ಸಚಿವರು ಹಂಚಿಕೊಂಡಿದ್ದಾರೆ. ನಾಲ್ಕು ಸೀಟುಗಳ ಮಧ್ಯದಲ್ಲಿ ಟೇಬಲ್ ಇದ್ದು ಅದರಲ್ಲಿ ಚಿಕ್ಕದೊಂದು ಸ್ಕ್ರೀನ್ ಇರುವುದನ್ನೂ ಕಾಣಬಹುದಾಗಿದೆ. ‘ಇದು ತೇಜಸ್ ಎಕ್ಸ್‌ಪ್ರೆಸ್’ ಎಂದು ಸಚಿವರು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!