ಹೊಸದಿಗಂತ ವರದಿ,ಶಿವಮೊಗ್ಗ:
ಆಯನೂರು ಗ್ರಾಮದ ಪಿಯು ಕಾಲೇಜ್ ಕಾಂಪೌಂಡ್ ಹಿಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಗಾಂಜಾ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಕುಂಸಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ತಾಲೂಕಿನ ಹಾರ್ನಳ್ಳಿ ಗ್ರಾಮದ ಶಾಂತಿನಗರ ನಿವಾಸಿ ವಿಷ್ಣು ಪಿ (26), ನಾರಾಯಣಪುರ ಗ್ರಾಮದ ಸುನಿಲ್ ನಾಯಕ (30) ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 12,500 ರೂ. ಮೌಲ್ಯದ 350 ಗ್ರಾಂ ಗಾಂಜಾ ಸೊಪ್ಪನ್ನು ಹಾಗೂ ಗಾಂಜಾ ಸೇವನೆ ಮಾಡಲು ಬಳಸುತ್ತಿದ್ದ ಕೊಳವೆಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ.
ಶಿವಮೊಗ್ಗ ಬಿ ಉಪವಿಭಾಗದ ಡಿವೈಎಸ್‌ಪಿ ಸುರೇಶ್ ಮಾರ್ಗದರ್ಶನದ ಮೇರೆಗೆ ಕುಂಸಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹರೀಶ್ ಕೆ ಪಟೇಲ್ ತಂಡ ದಾಳಿ ನಡೆಸಿತು. ದಾಳಿಯಲ್ಲಿ ಶಾಂತರಾಜ್ ಪಿಎಸ್‌ಐ, ತೊಳಚ ನಾಯಕ್ ಪಿಎಸ್‌ಐ, ಸಿಬ್ಬಂದಿಗಳಾದ ಹಾಲಪ್ಪ, ಪ್ರಕಾಶ್, ಶಿವಪ್ಪ, ಶಶಿ‘ರ್ ನಾಯಕ್, ವಿನಾಯಕ್, ಶಶಿ, ಆದರ್ಶ, ಪಾಲ್ಗೊಂಡಿದ್ದರು.