AYODHYA | ಮೆಕ್ಕೆಜೋಳದಲ್ಲಿ ರಾಮಮಂದಿರ ನಿರ್ಮಾಣ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ಕಟ್ಟಲಾಗಿದೆ, ಕರ್ನಾಟಕದಲ್ಲೂ ಒಂದು ರಾಮಮಂದಿರ ನಿರ್ಮಾಣವಾಗಿದೆ, ಅದು ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಮೆಕ್ಕೆಜೋಳದಿಂದ ರಾಮಮಂದಿರ ನಿರ್ಮಾಣವಾಗಿದೆ.

ರೈತ ತಾತನಗೌಡ ಖಾಸಗಿ ಸೀಡ್ಸ್ ಕಂಪನಿಯೊಂದರ ಸಹಯೋಗದಿಂದ ಮೆಕ್ಕೆಜೋಳದಲ್ಲಿ ಈ ರಾಮಮಂದಿರ ನಿರ್ಮಾಣ ಮಾಡಿದ್ದಾರೆ.

ಸರಿಸುಮಾರು ಐದು ಸಾವಿರ ಮೆಕ್ಕೆಜೋಳ ತೆನೆಗಳನ್ನು ಬಳಸಿ ರಾಮಮಂದಿರ ನಿರ್ಮಿಸಲಾಗಿದೆ. 10 ಜನ ಕಾರ್ಮಿಕರ ಪರಿಶ್ರಮದಿಂದ ಈ ರಾಮಮಂದಿರ ನಿರ್ಮಾಣವಾಗಿದೆ.

ಮೆಕ್ಕೆಜೋಳ ತೆನೆಯಲ್ಲಿ ಕಟ್ಟಲಾದ ರಾಮಮಂದಿರವನ್ನು ನೋಡಲು ಅನೇಕ ಜನ ಬರುತ್ತಿದ್ದಾರೆ. ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಆಗುವ ಜನವರಿ 22 ರವರಗೆ ಮೆಕ್ಕೆಜೋಳದಿಂದ ಕಟ್ಟಲಾದ ರಾಮಮಂದಿರ ಇರುವುದು ಎನ್ನಲಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!