Tuesday, February 27, 2024

ಊರ ತುಂಬಾ ಸಖತ್ ವೈರಲಾಗುತ್ತಿದ್ದಾನೆ ಕೊಳಲನೂದಿ ಅಕ್ಷತೆ ಹಂಚುವ ಈ ಪೋರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಳಲನ್ನು ಊದುತ್ತಾ ಮನೆಮನೆಗೆ ತರಳಿ ಅಯೋಧ್ಯೆ ಪ್ರಭು ಶ್ರೀರಾಮಚಂದ್ರನ ಮಂದಿರದ ಮಂತ್ರಾಕ್ಷತೆ ನೀಡುತ್ತಾ ಸಾಗುತ್ತಿರುವ ಬಾಲಕನೋರ್ವನ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಉಷಾ ಎಂಬವರು ತಮ್ಮ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಮೆಚ್ಚುಗೆಯ ನಾಲ್ಕು ಸಾಲುಗಳನ್ನು ಬರೆದಿದ್ದಾರೆ.

ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣಪ್ರತಿಷ್ಠಗೆ ಜ.೨೨ ಮುಹೂರ್ತ ನಿಗದಿಯಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಈಗ ದೇಶದ ಮನೆಮನೆಗಳಿಗೆ ಅಯೋಧ್ಯೆಯಿಂದ ಪವಿತ್ರ ಮಂತ್ರಾಕ್ಷತೆ ಹಂಚಲಾಗುತ್ತಿದೆ. ಇದೇ ಹೊತ್ತಿನಲ್ಲಿ ಈ ಬಾಲಕನ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!