ಅಯೋಧ್ಯೆಯ ಸರಯೂ ನದಿ ತೀರದಲ್ಲಿ 12 ಲಕ್ಷ ದೀಪಗಳನ್ನು ಬೆಳಗಿಸಲು ಸಿದ್ಧತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೀಪಾವಳಿಗೆ ಮುಂಚಿತವಾಗಿ, ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಆರನೇ ದೀಪೋತ್ಸವವನ್ನು (ದೀಪಗಳ ಹಬ್ಬ) ಆಚರಿಸಲು ಉತ್ತರ ಪ್ರದೇಶ ಸರ್ಕಾರವು ಭರದ ಸಿದ್ಧತೆ ನಡೆಸುತ್ತಿದೆ.
ಈ ಬಾರಿಯ ದೀಪೋತ್ಸವವನ್ನು ವಿಜೃಂಭಣೆಯಿಂದ ಮತ್ತು ವೈಭವದಿಂದ ಆಚರಿಸಲಾಗುವುದು.
ಈ ಬಾರಿ 12 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸುವ ಗುರಿಯನ್ನು ಇಡಲಾಗಿದೆ. ಈ ಮೂಲಕ ಇದೊಂದು ಗಿನ್ನಿಸ್ ದಾಖಲೆ ಆಗಲಿದೆ. ಮಹತ್ವದ ಸಾಧನೆ ಮಾಡಲು ಅಯೋಧ್ಯೆ, ಲಕ್ನೋ, ಗೊಂಡಾ ಮತ್ತಿತರ ಜಿಲ್ಲೆಗಳಿಂದ ಮಣ್ಣಿನ ಮಡಕೆಗಳನ್ನು ತರಲಾಗುತ್ತಿದೆ.

ರಾಮ್ ಪಾಡಿಯಲ್ಲಿ ದೀಪಗಳನ್ನು ಸಂಗ್ರಹಿಸುವ ಪ್ರಕ್ರಿಯೆಯೂ ಪ್ರಾರಂಭವಾಗಿದೆ. ಜಿಲ್ಲಾಡಳಿತದ ಪ್ರಕಾರ ಕಳೆದ ಐದು ವರ್ಷಗಳಿಗಿಂತ ಭಿನ್ನವಾಗಿ ಈ ವರ್ಷ 30 ನಿಮಿಷಕ್ಕೂ ಹೆಚ್ಚು ಕಾಲ ದೀಪಗಳು ಉರಿಯಲಿವೆ. ಈಗ ಜನರು ದೀಪಗಳು ಹೆಚ್ಚು ಕಾಲ ಉರಿಯುವುದನ್ನು ವೀಕ್ಷಿಸಬಹುದು. ಮೊದಲು ದೀಪಗಳು ಬೇಗನೆ ಆರಿಹೋಗುತ್ತಿದ್ದವು. ಅದರ ಭವ್ಯತೆ ಬೇಗನೆ ಮುಗಿದುಹೋಗುತ್ತಿತ್ತು.
ಈ ಬಾರಿ 30 ಮಿ.ಲೀ ಬದಲಿಗೆ, 40 ಮಿ.ಲೀ ಎಣ್ಣೆಯನ್ನು ದೀಪಗಳಲ್ಲಿ ಸುರಿಯಲಾಗುತ್ತದೆ ಇದರಿಂದ ಅವು ದೀರ್ಘಕಾಲ ಬೆಳಗುತ್ತವೆ. 2021 ರಲ್ಲಿ, ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ಮತ್ತು ಡಾ ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾನಿಲಯವು ಜಂಟಿಯಾಗಿ ಅಯೋಧ್ಯೆಯ ರಾಮ್ ಕಿ ಪಹಡಿ ಘಾಟ್‌ಗಳಲ್ಲಿ ದೀಪೋತ್ಸವದ ಸಮಯದಲ್ಲಿ “ಎಣ್ಣೆ ದೀಪಗಳ ಅತಿದೊಡ್ಡ ಪ್ರದರ್ಶನ” ಗಾಗಿ ಗಿನ್ನೆಸ್ ವಿಶ್ವ ದಾಖಲೆ ಬರೆದಿತ್ತು. ಕಳೆದ ವರ್ಷ ದೀಪೋತ್ಸವದಲ್ಲಿ 9 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!