ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ರಾಮನವಮಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದೆ, ಅದರಲ್ಲೂ ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿರುವ ರಾಮ ಮಂದಿರದಲ್ಲಿ ಬಾಲ ರಾಮನ ಹಣೆಯನ್ನು ಸೂರ್ಯ ರಶ್ಮಿ ಸ್ಪರ್ಶಿಸಿದೆ. ದೇಶ ಮತ್ತು ಪ್ರಪಂಚದ ಕೋಟ್ಯಂತರ ಜನರು ಈ ಅದ್ಭುತ ದೃಶ್ಯವನ್ನು ವೀಕ್ಷಿಸಿ ಕಣ್ತುಂಬಿಕೊಂಡಿದ್ದಾರೆ.
ರಾಮ ಮಂದಿರದಲ್ಲಿ ಆರತಿಯನ್ನು ನೆರವೇರಿಸಲಾಗಿದ್ದು. ಭಕ್ತರ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು, ಬಸ್ತಿ-ಅಯೋಧ್ಯೆ ಚತುಷ್ಪಥದಲ್ಲಿ ಭಾರೀ ವಾಹನಗಳ ಸಂಚಾರವನ್ನು ಏಪ್ರಿಲ್ 7 ರವರೆಗೆ ಬದಲಾಯಿಸಲಾಗಿದೆ.