ಆಯುಷ್ ಸಚಿವಾಲಯದಿಂದ ಯೋಗ-2023 ಪ್ರಧಾನ ಮಂತ್ರಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಯುಷ್ ಸಚಿವಾಲಯದಿಂದ ಯೋಗ-2023 ಪ್ರಧಾನ ಮಂತ್ರಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಆಯುಷ್ ಸಚಿವಾಲಯವು ಯೋಗ 2023 ರ ಪ್ರಧಾನಮಂತ್ರಿ ಪ್ರಶಸ್ತಿಗಳಿಗೆ ಅರ್ಜಿ ಅಥವಾ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು ಯೋಗದ ಬೆಳವಣಿಗೆ(ಅಭಿವೃದ್ಧಿ), ಉತ್ತೇಜನ ಮತ್ತು ಪ್ರಚಾರಕ್ಕಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುವ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ, ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

2 ರಾಷ್ಟ್ರೀಯ ಪ್ರಶಸ್ತಿಗಳನ್ನು ಭಾರತೀಯ ಮೂಲದ ಸಂಘ ಸಂಸ್ಥೆಗಳಿಗೆ ಮತ್ತು 2 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಭಾರತೀಯ ಅಥವಾ ವಿದೇಶಿ ಮೂಲದ ಸಂಘ ಸಂಸ್ಥೆಗಳೆಗೆ ನೀಡಲಾಗುವುದು.

ಈ ವರ್ಷದ ಪ್ರಶಸ್ತಿ ವಿಜೇತರ ಪಟ್ಟಿಯನ್ನು 9ನೇ ಅಂತಾರಾಷ್ಟ್ರೀಯ ಯೋಗ ದಿನದಂದು (ಜೂನ್ 21, 2023) ಘೋಷಿಸಲಾಗುತ್ತದೆ.

2023 ರ ಪ್ರಶಸ್ತಿಯ ಅರ್ಜಿ ಅಥವಾ ನಾಮನಿರ್ದೇಶನ ಪ್ರಕ್ರಿಯೆಯನ್ನು ಪ್ರಸ್ತುತ MyGov ನ ವೆಬ್‌ಸೈಟ್‌ನಲ್ಲಿ ಹೋಸ್ಟ್ ಮಾಡಲಾಗಿದೆ. ಈ ವರ್ಷದ ಪ್ರಶಸ್ತಿಗಳಿಗೆ ಅರ್ಜಿಗಳು ಅಥವಾ ನಾಮನಿರ್ದೇಶನ ಪ್ರಕ್ರಿಯೆಯು ಈ ತಿಂಗಳ 31 ರವರೆಗೆ ತೆರೆದಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!