Friday, March 24, 2023

Latest Posts

CINE NEWS | ನನ್ನ ಭಾಷೆ ಬಳಕೆ ಸರಿ ಇರ್ಲಿಲ್ಲ, ಕೆಜಿಎಫ್ ಬಗ್ಗೆ ಮಾತನಾಡಿದ್ದಕ್ಕೆ ಕ್ಷಮೆ ಕೇಳಿದ ನಿರ್ದೇಶಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲುಗಿನ ನಿರ್ದೇಶಕ ವೆಂಕಟೇಶ್ ಮಹಾ ಕೆಜಿಎಫ್ ಸಿನಿಮಾ ಬಗ್ಗೆ ಕೆಟ್ಟ ಶಬ್ದಗಳನ್ನು ಬಳಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

ವ್ಯಾಪಕ ವಿರೋಧದ ನಂತರ ಇದೀಗ ಮಹಾ ಕ್ಷಮೆ ಕೋರಿದ್ದಾರೆ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಆದರೆ ಭಾಷೆ ತಪ್ಪು, ಆ ರೀತಿ ಭಾಷೆ ಬಳಕೆ ಮಾಡಿದ್ದಕ್ಕೆ ಕ್ಷಮೆ ಇರಲಿ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಕೆಜಿಎಫ್ ಬಗ್ಗೆ ಹಗುರವಾಗಿ ಮಹಾ ಮಾತನಾಡಿದ್ದು, ಅವರ ಭಾಷೆ ಬಳಕೆಯನ್ನು ಎಲ್ಲರೂ ವಿರೋಧಿಸಿದ್ದರು. ಇದೀಗ ಅವರು ಎಲ್ಲರಿಗೂ ಕ್ಷಮೆ ಕೇಳಿದ್ದಾರೆ. ನಾನು ಆಡಿದ ಮಾತು ಸರಿಯಾಗಿರಲಿಲ್ಲ. ಈ ರೀತಿ ಮಾತನಾಡಿದ್ದಕ್ಕೆ ಕ್ಷಮೆ ಇರಲಿ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!