ಶಬರಿಮಲೆಯಲ್ಲಿ ನಾಳೆಯಿಂದ ಸಿಗಲಿದೆ ಅಯ್ಯಪ್ಪ ಸ್ವಾಮಿ ದರುಶನ, ವರ್ಚ್ಯುಯಲ್ ಕ್ಯೂ ಮೂಲಕ ಮಾತ್ರ ಪ್ರವೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆಯ ಅಯ್ಯಪ್ಪ ದೇಗಲವು ಇಂದು ತೆರೆಯಲಿದ್ದು, ನಾಳೆಯಿಂದ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿರಲಿದೆ. ವಾರ್ಷಿಕ ಮಂಡಲಂ ಮಕರವಿಳುಕ್ಕು ಯಾತ್ರೆಗೂ ನಾಳೆಯಿಂದ ಚಾಲನೆ ಸಿಗಲಿದೆ. ಇಂದು ಸಂಜೆ5 ಗಂಟೆಗೆ ದೇವಾಲಯ ತೆರೆಯಲಿದ್ದು, ಪೂಜಾ ವಿಧಿವಿಧಾನಗಳು ನೆರವೇರಲಿವೆ.

ಕೊರೋನಾ ನಿರ್ಬಂಧ ಕಾರಣ ಎರಡು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಂತಿಲ್ಲ ಎನ್ನಲಾಗಿತ್ತು. ಆದರೆ ಈ ಬಾರಿ ನಿಯಮ ಸಡಿಲಿಸಲಾಗಿದೆ. ಹಾಗಾಗಿ ಹೆಚ್ಚು ಭಕ್ತಾದಿಗಳು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವ ಸಾಧ್ಯತೆ ಇದೆ. ವರ್ಚ್ಯುಯಲ್ ಕ್ಯೂ ಮೂಲಕ ಮಾತ್ರ ಪ್ರವೇಶ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 13 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

41ದಿನಗಳ ಮಂಡಲ ಪೂಜಾ ವಿಧಿಗಳು ಡಿ.27 ಕ್ಕೆ ಮುಕ್ತಾಯಾಗಲಿದೆ. ಮಕರ ಸಂಕ್ರಾಂತಿ ಜ್ಯೋತಿ ದರ್ಶನ ನಂತರ ಜನವರಿ 20 ರಂದು ದೇಗುಲವನ್ನು ಮುಚ್ಚಲಾಗುತ್ತದೆ. ಈ ವರ್ಷದ ಶಬರಿಮಲೆ ಯಾತ್ರೆ ಇಲ್ಲಿಗೆ ಮುಕ್ತಾಯವಾಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!