ತಾತ- ಮೊಮ್ಮಗನಾಗಿ ನಗಿಸಲು ಬರುತ್ತಿದ್ದಾರೆ ಅನಂತ್‌ ನಾಗ್‌- ದಿಗಂತ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
 ದೂದ್ ಪೇಡ ದಿಗಂತ್ ಮತ್ತು ಹಿರಿಯ ನಟ ಅನಂತ್ ನಾಗ್ ಕಾಂಬಿನೇಷನ್‌ ನಲ್ಲಿ ಮೂಡಿಬಂದಿರುವ ಚಿತ್ರ ʼತಿಮ್ಮಯ್ಯ & ತಿಮ್ಮಯ್ಯʼ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕುತ್ತಿದೆ.
ನಿರ್ದೇಶಕ ಸಂಜಯ್ ಶರ್ಮಾ ಚೊಚ್ಚಲ ನಿರ್ದೇಶನ ಚಿತ್ರದಲ್ಲಿ ನವಿರಾದ ಹಾಸ್ಯದ ಜೊತೆಗೆ ಕೌಟುಂಬಿಕ ಸಂಬಂಧಗಳ ಪ್ರಾಮುಖ್ಯತೆಯ ಕುರಿತಾಗಿ ಹೇಳಲಾಗಿದೆ. ಇದರಲ್ಲಿ ದಿಗಂತ್ ಅನಂತ್ ನಾಗ್ ಅವರ ಮೊಮ್ಮಗನಾಗಿ ನಟಿಸಿದ್ದಾರೆ. ʼತಿಮ್ಮಯ್ಯ ಮತ್ತು ತಿಮ್ಮಯ್ಯ 30 ವರ್ಷಗಳ ನಂತರ ಭೇಟಿಯಾಗುವ ಅಜ್ಜ ಮತ್ತು ಮೊಮ್ಮಗನ ಕಥೆಯಾಗಿದೆ. ಇವರಿಬ್ಬರು ಮೂರು ತಿಂಗಳ ಕಾಲವನ್ನು ಒಟ್ಟಿಗೆ ಕಳೆಯಬೇಕಾದ ಸನ್ನಿವೇಶ ನಿರ್ಮಾಣವಾದಾಗ ಏನೇನೆಲ್ಲಾ ನಡೆಯುತ್ತದೆ ಎನ್ನುವುದನ್ನು ಹಾಸ್ಯ ದೃಶ್ಯಗಳ ಮೂಲಕ ಕಟ್ಟಿಕೊಟ್ಟಿದ್ದೇವೆ ಎನ್ನುತ್ತಾರೆ ನಿರ್ದೇಶಕ ಸಂಜಯ್‌ ಶರ್ಮಾ.

ಇತ್ತೀಚೆಗೆ ಚಿತ್ರತಂಡವು ಟೀಸರ್ ಬಿಡುಗಡೆ ಮಾಡಿದ್ದು, ತಿಮ್ಮಯ್ಯ ಮತ್ತು ತಿಮ್ಮಯ್ಯ ಚಿತ್ರ ಡಿಸೆಂಬರ್ 2 ರಂದು ಪ್ರೇಕ್ಷಕರ ಮುಂದೆ ಬರಲಿದೆ ಎಂದು ಚಿತ್ರತಂಡ ದಿನಾಂಕವನ್ನು ಘೋಷಿಸಿದೆ.
ತಿಮ್ಮಯ್ಯ ಮತ್ತು ತಿಮ್ಮಯ್ಯ ಚಿತ್ರದಲ್ಲಿ ಅನಂತನಾಗ್, ದಿಗಂತ್, ಐಂದ್ರಿತಾ ರೈ, ಶುಭ್ರ ಅಯ್ಯಪ್ಪ, ರುಕ್ಮಿಣಿ ವಿಜಯಕುಮಾರ್, ವಿನೀತ್ ಬೀಪ್ ಕುಮಾರ್, ಪ್ರಕಾಶ್ ತುಮ್ಮಿನಾಡ್, ಕೆ.ಎಸ್.ಶ್ರೀಧರ್, ಮಿಮಿಕ್ರಿ ಗೋಪಿ, ಅಂಬುಜಾಕ್ಷಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!