Friday, December 8, 2023

Latest Posts

ಅಮೃತಯಾತ್ರೆ: ಹೆದ್ದಾರಿ ಕಟ್ಟೋದ್ರಲ್ಲಿ ಹೀರೋ ಆಗ್ತಿದೆ ಭಾರತ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

19,811 ಕಿಲೋಮೀಟರುಗಳು… ಇದು 1950-51ರಲ್ಲಿ ಭಾರತ ಹೊಂದಿದ್ದ ಹೆದ್ದಾರಿಯ ಪ್ರಮಾಣ. 2021-22ರಲ್ಲಿ ಇದು 1,40,995 ಕಿಲೋಮೀಟರುಗಳಿಗೆ ವಿಸ್ತರಿಸಿದೆ.

ಇದು ಒಟ್ಟಾರೆ ಈ ಏಳು ದಶಕಗಳ ಸ್ವರಾಜ್ಯದ ಓಟವಾದರೂ ಹೆದ್ದಾರಿ ನಿರ್ಮಾಣದ ವಿಭಾಗದಲ್ಲಿ ಗಣನೀಯ ಸಾಧನೆ ಆಗಿದ್ದು ಇತ್ತೀಚಿನ ವರ್ಷಗಳಲ್ಲೇ. ಅಟಲ್ ಬಿಹಾರಿ ವಾಜಪೇಯಿಯವರ ಸುವರ್ಣ ಚತುಷ್ಪಥ ಯೋಜನೆ ಹೆದ್ದಾರಿ ನಿರ್ಮಾಣದಲ್ಲಿ ಕ್ರಾಂತಿ ಶುರು ಮಾಡಿತು. ಇದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡುಹೋಗುತ್ತಿರುವುದು ಇಂದಿನ ಮೋದಿ ಸರ್ಕಾರದ ಶ್ರೇಯಸ್ಸು.

2013-14ರಲ್ಲಿ 4,260 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿತ್ತು. ಅದೇ, 2020-21ರಲ್ಲಿ ನಿರ್ಮಾಣವಾದ ಹೆದ್ದಾರಿ ಪ್ರಮಾಣ 13,327 ಕಿಮೀ ಎಂಬ ಅಂಶವೇ ಈ ವಿಭಾಗದಲ್ಲಾಗುತ್ತಿರುವ ವಿಭಿನ್ನ ಪ್ರಯತ್ನ ಮತ್ತು ಯಶವನ್ನು ಸಾರುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!