ಆಜಾದಿ ಕಾ ಅಮೃತ್ ಮಹೋತ್ಸವ: 6ಖಂಡಗಳಲ್ಲಿ ತಿರಂಗ ಹಾರಿಸಿದ ನೌಕಾಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯು ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಯೋಜಿಸಿದೆ. ಈ ಕಾರ್ಯಕ್ರಮವನ್ನು ಆರು ಖಂಡಗಳು ಮತ್ತು ಮೂರು ಸಾಗರಗಳ ಆರು ವಲಯಗಳಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಲ್ಲಿನ ಭಾರತೀಯ ಯುದ್ಧನೌಕೆಗಳಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.

ಈ ಘಟನೆಯನ್ನು ವೀಕ್ಷಿಸಲು ಸ್ಥಳೀಯ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ತಮ್ಮ ದೇಶಭಕ್ತಿಯನ್ನು ತೋರಿಸಿದರು. ಬಂದರುಗಳಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿ, ಅಲ್ಲಿದ್ದ ಯುದ್ಧನೌಕೆಗಳನ್ನು ಹತ್ತಿ ಫೋಟೋಗಳನ್ನು ತೆಗೆದುಕೊಂಡರು. ಈ ಕಾರ್ಯಕ್ರಮದ ಅಂಗವಾಗಿ ಭಾರತೀಯ ಯುದ್ಧನೌಕೆ ‘ಐಎನ್‌ಎಸ್ ಸೂರ್ಯ’ ಸಿಂಗಾಪುರದ ಚಾಂಗಿ ನೌಕಾನೆಲೆಗೆ ಆಗಮಿಸಿ, ಭಾರತದ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲಾಯಿತು. ದಕ್ಷಿಣ ಅಮೆರಿಕಾದ ಬ್ರೆಜಿಲ್‌ನಲ್ಲಿರುವ ಭಾರತೀಯ ನೌಕಾಪಡೆಯ ಐಎನ್‌ಎಸ್ ತಾರಾಕ್ಸ್‌ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ನೌಕಾಪಡೆ ಸಿಬ್ಬಂದಿ ಪರೇಡ್ ನಡೆಸಿದರು. ಯುರೋಪಿಯನ್ ಸಮುದ್ರದಲ್ಲಿ ಐಎನ್‌ಎಸ್ ತರಂಗಿಣಿ ಹಡಗಿನಲ್ಲಿ ರಾಷ್ಟ್ರಧ್ವಜವ ಹಾರಾಡಿದೆ.

ಕೀನ್ಯಾದ ಮೊಂಬಾಸಾ ಬಂದರಿನಲ್ಲಿ INS ತಬರ್ ತಿರಂಗ ಹಾರಿಸಿದೆ. ಆಸ್ಟ್ರೇಲಿಯಾದ ಪರ್ತ್ ಬಂದರಿನಲ್ಲಿ ಐಎನ್‌ಎಸ್ ಸುಮೇಧಾದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ನಡೆಯಿತು. ಅಮೆರಿಕದ ಸ್ಯಾನ್ ಡಿಯಾಗೋ ಬಂದರಿನಲ್ಲೂ ಸಹ ಭಾರತದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳ ವಿವರಗಳನ್ನು ಭಾರತೀಯ ನೌಕಾಪಡೆಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!