Wednesday, November 30, 2022

Latest Posts

ಆಜಾದಿ ಕಾ ಅಮೃತ ಮಹೋತ್ಸವ: ಹರ್ ಘರ್ ತಿರಂಗಾ ಎತ್ತಿನಗಾಡಿ ಯಾತ್ರೆ!

ಹೊಸದಿಗಂತ ವರದಿ, ಮೈಸೂರು:

ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಎತ್ತಿನಗಾಡಿ ಯಾತ್ರೆಯನ್ನು ನಗರದಲ್ಲಿ ಶುಕ್ರವಾರ ಬಿಜೆಪಿ ರೈತ ಮೋರ್ಚಾ ವತಿಯಿಂದ ನಡೆಸಲಾಯಿತು. ವಿಶೇಷವಾಗಿ ಎತ್ತಿನ ಗಾಡಿಗಳ ಮುಖಾಂತರ ತಿರಂಗ ಯಾತ್ರೆಗೆ ವೀರನಗೆರೆಯಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಎತ್ತಿ ಗಾಡಿಗೆ ಪುಷ್ಪರ್ಚಾನೆ ಮಾಡುವ ಮೂಲಕ ಚಾಲನೆ ನೀಡಿಲಾಯಿತು. ಈ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಮಾತಾನಾಡಿ, ಈ ದೇಶದ ಅಸ್ತಿ ಈ ನಾಡಿನ ರೈತರು. ಅವರ ಹೆಸರಿನಲ್ಲಿ ನರೇಂದ್ರ ಮೋದಿ ಆದೇಶದಂತೆ ಎತ್ತಿನ ಗಾಡಿ ಯಾತ್ರೆಯನ್ನು ಯಶ್ವಸಿಯಾಗಿ ಪೂರೈಸಿದ್ದೇವೆ. ಈ ಬಾರಿ ಅತೀ ಹೆಚ್ಚು ರೈತರು ತಮ್ಮ ಮನೆಯ ಮೇಲೆ ತ್ರಿವಣ ಧ್ವಜವನ್ನು ಹಾರಿಸಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಮೇಯರ್ ಸುನಾಂದ ಪಾಲನೇತ್ರ, ಮಾಜಿ ಮೇಯರ್ ಸಂದೇಶ್‌ಸ್ವಾಮಿ, ಮೈಸೂರು ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ರೈತ ಮೋರ್ಚಾ ನಗರ ಅಧ್ಯಕ್ಷ ದೇವರಾಜ್, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ರು, ಕಾರ್ತಿಕ್ ಗೌಡ, ಉಪಾಧ್ಯಕ್ಷರು ಮಧು ಎನ್ ಪೂಜಾರ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!