ಆಜಂ ಖಾನ್ ಕೋಮುವಾದಿ ಶಕ್ತಿಗಳ ಬದ್ಧ ವಿರೋಧಿ, ಬಿಜೆಪಿ ಕಿರುಕುಳ ನೀಡುತ್ತಿದೆ: ಅಖಿಲೇಶ್ ಯಾದವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದ್ವೇಷ ಭಾಷಣದ ಪ್ರಕರಣದಲ್ಲಿ ಸಂಸದ ಸ್ಥಾನ ಕಳೆದುಕೊಂಡಿರುವ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಅವರನ್ನು ಬಿಜೆಪಿ ಗುರಿಯಾಗಿಸುತ್ತಿದೆ ಖಾನ್ ಮೇಲೆ ಸುಳ್ಳು ಪ್ರಕರಣಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ದ್ವೇಷ ಭಾಷಣ ಪ್ರಕರಣದಲ್ಲಿ ನ್ಯಾಯಾಲಯವು ಅಜಂ ಖಾನ್ ಅವರನ್ನು ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿದ ಒಂದು ದಿನದ ನಂತರ ಯಾದವ್ ಅವರ ಹೇಳಿಕೆಗಳು ಬಂದಿವೆ. ಅಖಿಲೇಶ್ ಯಾದವ್, “ಮೊಹಮ್ಮದ್ ಅಜಂ ಖಾನ್ ಅವರು ಬಿಜೆಪಿ ಸರ್ಕಾರದ ಕಣ್ಣು ಕುಕ್ಕುತ್ತಿದ್ದಾರೆ. ಏಕೆಂದರೆ ಅವರು ಕೋಮುವಾದಿ ಶಕ್ತಿಗಳ ಬದ್ಧ ವಿರೋಧಿ ಮತ್ತು ಪ್ರಜಾಪ್ರಭುತ್ವ ಮತ್ತು ಸಮಾಜವಾದಕ್ಕೆ ಬದ್ಧರಾಗಿದ್ದಾರೆ. ಅವರು ಸೃಜನಶೀಲ ಕೆಲಸದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಮೊಹಮ್ಮದ್ ಅಜಮ್ ಖಾನ್ ಅವರು ಸಂವಿಧಾನ ಮತ್ತು ಜಾತ್ಯತೀತತೆಗಾಗಿ ನಿರಂತರ ಹೋರಾಟದ ನಾಯಕರಾಗಿದ್ದಾರೆ” ಎಂದಿದ್ದಾರೆ.

“ಅಜಂ ಖಾನ್ ಅವರು ರಾಂಪುರದಲ್ಲಿ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆ, ಮೌಲಾನಾ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯವನ್ನು ನಿರ್ಮಿಸಿದ್ದಾರೆ ಎಂದು ಬಿಜೆಪಿಗೆ ಬೇಸರವಾಗಿದೆ, ಇದು ಕ್ಷೇತ್ರದ ಯುವಕರಿಗೆ ಪ್ರಗತಿಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಸರ್ಕಾರವು ಮಹತ್ತರವಾದ ಕೆಲಸವನ್ನು ಮೆಚ್ಚುವ ಬದಲು ನಾಶಮಾಡಲು ಮುಂದಾಗಿದೆ. ವಿಶ್ವ ವಿದ್ಯಾಲಯದ ಮೇಲೆಯೇ, ಮೊಹಮ್ಮದ್ ಅಜಂ ಖಾನ್ ವಿರುದ್ಧ ಎಷ್ಟು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ, ಮೌಲಾನಾ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯವನ್ನು ಧ್ವಂಸಗೊಳಿಸುವಲ್ಲಿ ಬಿಜೆಪಿ ತೊಡಗಿದೆ” ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ

ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಎಸ್‌ಪಿ ನಾಯಕ, “ರಾಜಕೀಯದಲ್ಲಿ ದ್ವೇಷದ ಮನೋಭಾವಕ್ಕೆ ಸ್ಥಾನವಿಲ್ಲ ಎಂಬುದನ್ನು ಬಿಜೆಪಿ ಸರ್ಕಾರ ನೆನಪಿಟ್ಟುಕೊಳ್ಳಬೇಕು, ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳಿಗೆ ಸಮಾನ ಪಾತ್ರವಿದೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!