ಜಮ್ಮುವಿನಲ್ಲಿ ಬಿಜೆಪಿ ಸೇರ್ಪಡೆಯಾದ ಆಮ್ ಆದ್ಮಿ ನಾಯಕ, ಎಂಟು ಕಾರ್ಯಕರ್ತರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಮ್ಮುವಿನ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸತೀಶ್ ಶರ್ಮಾ ಶಾಸ್ತ್ರಿ ಮತ್ತು ಎಂಟು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈ ಪಕ್ಷದಿಂದ ಮಾತ್ರ ರಾಷ್ಟ್ರವನ್ನು ಬಲಪಡಿಸಲು ಮತ್ತು ಜನರ ಸೇವೆ ಮಾಡಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಮತ್ತು ಸಂಸದ ಜುಗಲ್ ಕಿಶೋರ್ ಶರ್ಮಾ ಅವರನ್ನು ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷಕ್ಕೆ ಸ್ವಾಗತಿಸಿದರು.
ಆಶಿಶ್ ಅಬ್ರೋಲ್, ರಾಕೇಶ್ ಶಾಸ್ತ್ರಿ, ರಾಕೇಶ್ ಬಾಲಿ, ಅಶೋಕ್ ಶರ್ಮಾ, ದೀಪಕ್ ಶರ್ಮಾ, ಸುನಿತಾ ದೇವಿ, ಚಾರು ಅಬ್ರೋಲ್ ಮತ್ತು ಮದನ್ ಲಾಲ್ ಶರ್ಮಾ ಎಎಪಿಯಿಂದ ಬಿಜೆಪಿಗೆ ಸೇರ್ಪಡೆಗೊಂಡ ಇತರರಾಗಿದ್ದಾರೆ.
ಶಾಸ್ತ್ರಿ ಅವರು ಸಮರ್ಪಿತ ಸಮಾಜ ಸೇವಕರಾಗಿದ್ದು, ಎಲ್ಲಾ ಹೊಸ ಸದಸ್ಯರು ಪಕ್ಷದ ತತ್ವಗಳಿಗೆ ಬದ್ಧರಾಗಿರುತ್ತಾರೆ ಎಂದು ರೈನಾ ಹೇಳಿದರು. ಎಎಪಿಗೆ ಸೇರುವ ತಮ್ಮ ಹಿಂದಿನ ನಿರ್ಧಾರಕ್ಕೆ ಪಶ್ಚಾತ್ತಾಪ ಪಟ್ಟಿದ್ದೇನೆ ಮತ್ತು ಬಿಜೆಪಿಯಿಂದ ಮಾತ್ರ ರಾಷ್ಟ್ರವನ್ನು ಬಲಪಡಿಸಲು ಸಾಧ್ಯ ಎಂದು ಶಾಸ್ತ್ರಿ ಹೇಳಿದರು.
“ನಾನು ಈಗ ಪ್ರಬುದ್ಧನಾಗಿದ್ದೇನೆ ಮತ್ತು ಜನರ ಸೇವೆಗೆ ಸಿದ್ಧನಾಗಿದ್ದೇನೆ” ಎಂದು ಅವರು ಹೇಳಿದರು.
ಜನರಿಗೆ ಸೇವೆ ಸಲ್ಲಿಸಲು ಮತ್ತು ರಾಷ್ಟ್ರೀಯತಾವಾದಿ ಶಕ್ತಿಗಳನ್ನು ಬಲಪಡಿಸಲು ಬಯಸುವ ಎಲ್ಲರಿಗೂ ಬಿಜೆಪಿಯ ದ್ವಾರಗಳು ತೆರೆದಿವೆ ಎಂದು ಜುಗಲ್ ಶರ್ಮಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!