ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೋಝ್ನಿ ಪ್ರಾಂತ್ಯದ ಬಳಿ ಅಜರ್ ಬಜಾನ್ ಏರ್ ಲೈನ್ಸ್ ಸೇರಿದ ವಿಮಾನ ಅಪಘಾತಕ್ಕೂ ಮುನ್ನಾ ಲ್ಯಾಂಡಿಂಗ್ ಆಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ರಷ್ಯಾದ ವಾಯುಸೇನೆಯು ಕಾರ್ಯಾಚರಣೆ ನಡೆಸುತಿತ್ತು ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಜರ್ ಬೈಜಾನ್ ನ ಅಧ್ಯಕ್ಷ ಇಲ್ ಹ್ಯಾಮ್ ಅಲಿಯೆವ್ ಅವರಿಗೆ ತಿಳಿಸಿದ್ದಾರೆ.
ಅಜೆರ್ಬೈಜಾನ್ ದೇಶದ ನಾಗರೀಕ ವಿಮಾನವನ್ನು ನೆಲಕ್ಕುರುಳಿಸಿದ ವಿಚಾರದಲ್ಲಿ ಅಜೆರ್ಬೈಜಾನ್ ದೇಶದ ಅಧ್ಯಕ್ಷರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಷಮೆ ಕೇಳಿದ್ದಾರೆ.
ಈ ಘಟನೆಯಲ್ಲಿ ಒಟ್ಟು 38 ಮಂದಿ ಸಾವು ಕಂಡಿದ್ದರು. ಆದರೆ, ಈ ಘಟನೆಗೆ ರಷ್ಯಾಗೆ ಕಾರಣ ಎನ್ನುವ ಮಾತನ್ನು ಅವರು ಒಪ್ಪಿಕೊಂಡಿಲ್ಲ. ಕ್ರಿಸ್‌ಮಸ್ ದಿನದಂದು ಸಂಭವಿಸಿದ ಅಪಘಾತದಲ್ಲಿ ಪುಟಿನ್ ಮಾಡಿದ ಮೊದಲ ಕಾಮೆಂಟ್ ಇದಾಗಿದೆ.
ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳು ಉಕ್ರೇನಿಯನ್ ಡ್ರೋನ್‌ಗಳನ್ನು ಸಕ್ರಿಯವಾಗಿ ಹಿಮ್ಮೆಟ್ಟಿಸುವಾಗ ದುರಂತ ಘಟನೆ ಸಂಭವಿಸಿದೆ ಎಂದು ಪುಟಿನ್ ಹೇಳಿದ್ದಾರೆ.
ವಿಮಾನವು ಚೆಚೆನ್ಯಾದಲ್ಲಿ ಇಳಿಯಲು ಪ್ರಯತ್ನಿಸುತ್ತಿರುವಾಗ ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳಿಂದ ದಾಳಿಗೆ ಒಳಾಗಿದೆ ಎಂದು ವರದಿಯಾಗಿದೆ. ಈ ವಿಮಾನವನ್ನು ಕ್ಯಾಸ್ಪಿಯನ್ ಸಮುದ್ರದ ಮೇಲೆ ತಿರುಗಿಸುವಂತೆ ತಿಳಿಸಲಾಗಿತ್ತು.
ಆದರೆ, ದಾಳಿಗೆ ಒಳಗಾಗಿದ್ದ ವಿಮಾನ, ಕಜಾಕ್‌ಸ್ತಾನದಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿತ್ತು. ವಿಮಾನದಲ್ಲಿದ್ದ 67 ಜನರ ಪೈಕಿ 38 ಮಂದಿ ಸಾವು ಕಂಡಿದ್ದರು.
ಪುಟಿನ್ ಅವರು ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ ಎಂದು ಕ್ರೆಮ್ಲಿನ್ ಶನಿವಾರ ಹೇಳಿಕೆಯನ್ನು ಬಿಡುಗಡೆ ಮಾಡಿದೆ. (ಅಧ್ಯಕ್ಷ) ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ವಾಯುಪ್ರದೇಶದಲ್ಲಿ ಸಂಭವಿಸಿದ ದುರಂತ ಘಟನೆಗೆ ಕ್ಷಮೆಯಾಚಿಸಿದರು ಮತ್ತು ಮತ್ತೊಮ್ಮೆ ಸಂತ್ರಸ್ಥ ಕುಟುಂಬಗಳಿಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಗಾಯಗೊಂಡವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಲು ಹಾರೈಸಿದ್ದಾರೆ ಎಂದು ಅದು ಹೇಳಿದೆ.
ರಷ್ಯಾದ ಕ್ಷಿಪಣಿ ದಾಳಿಗೆ ಒಳಗಾಗಿಯೇ ವಿಮಾನ ದುರಂತ ಸಂಭವಿಸಿದೆ ಅನ್ನೋದನ್ನ ಕ್ರೆಮ್ಲಿನ್ ಹೇಳಿಕೆಯಲ್ಲಿ ಎಲ್ಲೂ ಒಪ್ಪಿಕೊಂಡಿಲ್ಲ. ಇದಕ್ಕೂ ಮುನ್ನ ಈ ಪ್ರಕರಣದಲ್ಲಿ ರಷ್ಯಾ ಭಾಗಿಯಾಗಿದೆಯೇ ಎನ್ನುವುದನ್ನು ಖಚಿತಪಡಿಸಲು ನಿರಾಕರಿಸಿತ್ತು.
ಅಜೆರ್ಬೈಜಾನ್‌ನಲ್ಲಿನ ವಾಯುಯಾನ ತಜ್ಞರು ಮತ್ತು ಇತರರು ಎಲೆಕ್ಟ್ರಾನಿಕ್ ಜ್ಯಾಮಿಂಗ್‌ನಿಂದ ವಿಮಾನದ ಜಿಪಿಎಸ್ ವ್ಯವಸ್ಥೆಗಳು ಪ್ರಭಾವಿತವಾಗಿವೆ ಮತ್ತು ರಷ್ಯಾದ ವಾಯು ರಕ್ಷಣಾ ಕ್ಷಿಪಣಿ ಸ್ಫೋಟಗಳಿಂದ ಆದ ಶಾರ್ಪ್‌ನೆಲ್‌ಗಳಿಂದ ಹಾನಿಗೆ ಒಳಗಾಗಿದೆ ಎಂದು ತಿಳಿಸಿದೆ.