April 27, 2026
Monday, April 27, 2026
spot_img

ವೈದ್ಯರಿಲ್ಲದೇ ಹೆರಿಗೆ ಮಾಡಿಸಿದ ಲೇಡೀಸ್‌! ಈ ಮಗುವಿನ ಬರ್ತ್‌ಪ್ಲೇಸ್‌ ಚಲಿಸುವ ರೈಲಂತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿಮ್ಮ ಬರ್ಥ್‌ ಪ್ಲೇಸ್‌ ಯಾವುದು ಎಂದು ಜನ ಕೇಳಿದಾಗ ಸಾಮಾನ್ಯವಾಗಿ ಹಾಸ್ಪಿಟಲ್‌ ಹೆಸರು ಹೇಳುತ್ತಾರೆ. ಆದರೆ ಈ ಕಂದಮ್ಮನಿಗೆ ಮುಂದೆ ಯಾರಾದ್ರೂ ನಿನ್ನ ಬರ್ತ್‌ ಪ್ಲೇಸ್‌ ಯಾವುದು ಎಂದು ಕೇಳಿದರೆ ಮಂಗಳೂರು-ಬೆಂಗಳೂರು ರೈಲು ಎಂದು ಹೇಳಬೇಕಾಗುತ್ತದೆ!

ಹೌದು, ರೈಲಿನಲ್ಲಿಯೇ ಮಹಿಳೆಯೊಬ್ಬರು ಮಗುವಿನ ಜನ್ಮ ನೀಡಿದ್ದಾರೆ. ರೈಲಿನಲ್ಲಿದ್ದ ದಿಟ್ಟ ಮಹಿಳೆಯರೆಲ್ಲ ಸೇರಿ ಹೆರಿಗೆ ಮಾಡಿಸಿದ್ದು, ಸದ್ಯ ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.

ಮಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಗರ್ಭಿಣಿಗೆ ರೈಲಿನಲ್ಲಿಯೇ ಹೆರಿಗೆ ನೋವು ಕಾಣಿಸಿದೆ. ನೆಕ್ಸ್ಟ್‌ ಸ್ಟೇಷನ್‌ವರೆಗೂ ಕಾಯಲಾಗಿದೆ. ಆದರೆ ವೈದ್ಯರು ಸಿಗದ ಕಾರಣ ರೈಲಿನಲ್ಲಿಯೇ ಮಹಿಳೆಯರೆಲ್ಲ ಸೇರಿ ಸೀರೆ ಹಾಗೂ ಪರದೆಯನ್ನು ಕಟ್ಟಿ ಹೆರಿಗೆ ಮಾಡಿಸಿದ್ದಾರೆ.

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗರ್ಭಿಣಿಯ ಪಾಲಿಗೆ ಮಹಿಳೆಯರು ದೇವರಂತೆ ಬಂದಿದ್ದಾರೆ. ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್‌ನಲ್ಲಿ ಮಹಿಳೆಯರೇ ಚೈನ್‌ ಎಳೆದು ರೈಲು ನಿಲ್ಲಿಸಿ ಹೆರಿಗೆ ಮಾಡಿಸಿದ್ದಾರೆ. ನಂತರ ಅವರನ್ನು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !