ಬರೋಬ್ಬರಿ 10 ಬಿಲಿಯನ್ ವೀಕ್ಷಣೆ ಪಡೆದ ಮೊದಲ ಯೂಟ್ಯೂಬ್ ವಿಡಿಯೋ! ಯಾವುದು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುವ ವಿಡಿಯೋಗೆ ಒಂದು ಸಾವಿರ ವ್ಯೂಸ್ ಆಗೋದೆ ಕಷ್ಟ. ಅಂತದರಲ್ಲಿ 2016ರಲ್ಲಿ ಬಿಡುಗಡೆಯಾದ ವಿಡಿಯೋ 10 ಬಿಲಿಯನ್ ವ್ಯೂಸ್ ಪಡೆದುಕೊಳ್ಳುವ ಮೂಲಕ ದಾಖಲೆ ಬರೆದಿದೆ.
ಯುಟ್ಯೂಬ್​ನಲ್ಲಿ 2016ರಲ್ಲಿ ಬಿಡುಗಡೆಯಾದ ಬೇಬಿ ಶಾರ್ಕ್ ಹಾಡಿಗೆ​ ಡ್ಯಾನ್ಸ್ ಮಾಡಿದ ವಿಡಿಯೋ ಈಗ 10 ಬಿಲಿಯನ್ ವೀಕ್ಷಣೆ ಪಡೆದಿದೆ. ಈ ಮೂಲಕ ಅತಿ ಹೆಚ್ಚು ವೀಕ್ಷಣೆ ಪಡೆದಿರುವ ಮೊದಲ ವಿಡಿಯೊ ಇದಾಗಿದೆ.
2016ರ ಜೂನ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಈಗ 2022ಕ್ಕೆ ಇದು ಬರೋಬ್ಬರಿ 10,00,87,32,879 ವೀಕ್ಷಣೆ ಪಡೆದುಕೊಂಡಿದೆ.
ಬೇಬಿ ಶಾರ್ಕ್ ಹಾಡನ್ನು ಕೊರಿಯನ್ -ಅಮೆರಿಕನ್ ಗಾಯಕ ಹೋಪ್ ಸೆಗೋಯಿನ್ 2015ರಲ್ಲಿ ಹಾಡಿದ್ದರು. ಈ ವಿಡಿಯೋದಲ್ಲಿ ಇಬ್ಬರು ಮಕ್ಕಳು ಬೇಬಿ ಶಾರ್ಕ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಅವರ ಹಿಂದೆ ಶಾರ್ಕ್ ಮೀನು ಕೂಡ ಸುತ್ತಾಡುವ ಆನಿಮೇಟೆಡ್ ವಿಡಿಯೋ ಇದಾಗಿದೆ.
ಈ ಹಾಡು ಬಿಲ್ಬೋರ್ಡ್ ನ 100 ಹಾಟ್ ಹಾಡುಗಳ ಪಟ್ಟಿಯಲ್ಲಿ 32ನೇ ಸ್ಥಾನ ಪಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!