ನಟ ವಿಜಯ್ ಗೆ ಬಾರಿ ಹಿನ್ನೆಡೆ: ಬಿಎಂಡಬ್ಲ್ಯು ಪ್ರವೇಶ ತೆರಿಗೆ ಕಟ್ಟುವಂತೆ ಮದ್ರಾಸ್ ಹೈಕೋರ್ಟ್‌ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2005 ರಲ್ಲಿ ಅಮೆರಿಕದಿಂದ ಭಾರತಕ್ಕೆ ಆಮದು ಮಾಡಿಕೊಂಡಿದ್ದ ಬಿಎಂಡಬ್ಲ್ಯು ಎಕ್ಸ್5 ಐಷಾರಾಮಿ ಕಾರಿಗೆ ಪ್ರವೇಶ ತೆರಿಗೆ ಪಾವತಿಸದ ಹಿನ್ನೆಲೆ ನಟ ವಿಜಯ್ ಗೆ ದಂಡ ಪಾವತಿಸುವಂತೆ ತಮಿಳುನಾಡು ವಾಣಿಜ್ಯ ತೆರಿಗೆ ಇಲಾಖೆ ನೀಡಿದ ಆದೇಶ ನೀಡಿತ್ತು, ಈ ಆದೇಶ ಪ್ರಶ್ನಿಸಿ ನಟ ವಿಜಯ್ ಮದ್ರಾಸ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದು, ಅಲ್ಲಿ ಹಿನ್ನೆಡೆಯಾಗಿದೆ.
ಇಂದು ನ್ಯಾಯಮೂರ್ತಿ ಸುರೇಶ್ ಕುಮಾರ್ ಅವರ ಈ ಪ್ರಕರಣ ವಿಚಾರಣೆ ನಡೆಸಿದ್ದು, ಈ ವೇಳೆ ಕಾರು ಆಮದು ಮಾಡಿಕೊಂಡ ಸಮಯದಿಂದ ತಿಂಗಳಿಗೆ ಶೇ 2ರಷ್ಟು ಮಾತ್ರ ದಂಡವನ್ನು ಲೆಕ್ಕ ಹಾಕಬೇಕು. ಆದರೆ, ಅವರಿಗೆ ಶೇ 400ರಷ್ಟು ದಂಡ ವಿಧಿಸಲಾಗಿದೆ ಎಂದು ನಟ ವಿಜಯ್ ಪರ ವಕೀಲರು ಹೇಳಿದ್ದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು 2019 ರ ಅವಧಿಯ ನಂತರ BMW X5 ಐಷಾರಾಮಿ ಕಾರಿಗೆ ಪ್ರವೇಶ ತೆರಿಗೆಯನ್ನು ಪಾವತಿಸದಿದ್ದಕ್ಕಾಗಿ ದಂಡವನ್ನು ಪಾವತಿಸಲು ನಟನಿಗೆ ನಿರ್ದೇಶನ ನೀಡಿದರು.
ಅದರಂತೆ ಅದರಂತೆ 2005 ರಿಂದ 2019 ರ ಅವಧಿಯವರೆಗೆ ಪಾವತಿ ಮಾಡಬೇಕಿಲ್ಲ ಎಂದೂ ಸಹ ಆದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!