BIG NEWS | ಶಿರಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ: ವಾಹನ ಸಂಚಾರ ಸಂಪೂರ್ಣ ಬಂದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟಿಯ ದೋಣಿಗಲ್ ನಲ್ಲಿ ಶುಕ್ರವಾರ ರಸ್ತೆ ಮತ್ತೆ ಕುಸಿದಿದ್ದು, , ಸಂಚಾರಕ್ಕೆ ತೊಡಕಾಗಿದೆ.
ದೋಣಿಗಲ್ ನಲ್ಲಿ ಶುಕ್ರವಾರ ಮಧ್ಯಾಹ್ನ ರಸ್ತೆ ಕುಸಿದಿದ್ದು, ಬಿಸಲೆ ಘಾಟಿಗೆ ಹೋಗುವಂತಹ ರಸ್ತೆಯ ಪಕ್ಕದಲ್ಲಿದ್ದಂತಹ ಮಣ್ಣು ಕುಸಿದು ರಸ್ತೆ ಮೇಲೆ ಬಂದಿದೆ.
ಹಾಗಾಗಿ ಆ ಭಾಗದಲ್ಲಿ ಓಡಾಡುವಂತಹ ವಾಹನಗಳನ್ನ ಹಾಸನದ ಎಸ್ ಪಿ ಅವರು ತಡೆದಿದ್ದು, ಈಗ ಕುಸಿತಕ್ಕೊಳಗಾದ ಭಾಗದಲ್ಲಿ ಸ್ಯಾಂಡ್ ಬ್ಯಾಗ್ ಹಾಕಿ ಮಣ್ಣು ಜರಿಯುವುದನ್ನು ತಡೆಯುವ ಯತ್ನ ಮಾಡಲಾಗುತ್ತಿದೆ.
ಇದೀಗ ಘಾಟ್ ನಲ್ಲಿ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.
ಇದರ ಪರಿಣಾಮ ಮಂಗಳೂರಿಗೆ ಹೋಗುವ ಎಲ್ಲಾ ವಾಹನಗಳು ಬೇಲೂರು ಮೂಡಿಗೆರೆ ಮಾರ್ಗವಾಗಿ ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ಚಲಿಸಬೇಕು ಎಂದು ಹಾಸನ ಪೊಲೀಸರು ಪ್ರಕಟಣೆ ನೀಡಿದ್ದಾರೆ.
ಕೊಟ್ಟಿಗೆಹಾರ, ಮೂಡಿಗೆರೆ, ಹಾನ್ಬಾಲ್, ಬೇಲೂರು, ಹಾಸನ ಮಾರ್ಗವಾಗಿ ಬೆಂಗಳೂರು ಸಂಚಾರ ಮಾಡುವುದಕ್ಕೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!